ರಾಮನಗರ: ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕು, 100 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಅಖೀಲ ಕರ್ನಾಟಕ ತಿಗಳರ ಕ್ಷೇಮಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎ.ಎಚ್.ಬಸವರಾಜ್ ಆಗ್ರಹಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಓಟು ಪಡೆದ ರಾಜಕೀಯ ಪಕ್ಷಗ ಳು ಅಧಿಕಾರಕ್ಕೆ ಬಂದ ನಂತರ ಅಸಡ್ಡೆ ತೋರುತ್ತಿವೆ. ರಾಜ್ಯದಲ್ಲಿ 40ಲಕ್ಷಕ್ಕು ಹೆಚ್ಚು ಜನಸಂಖ್ಯೆ ಇರುವ ಸಮುದಾಯದ ಮುಂಖಂಡರಿಗೆ ರಾಜಕೀಯ ಸ್ಥಾನಮಾನ ಸಿಗಲಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ನಿಗಮಕ್ಕೆ ಮತ್ತು ಹಾಲಿ ಸರ್ಕಾರ ಕೆಪಿಎಸ್‌ಸಿಗೆ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ ಎಂದು ಹೇಳಿದರು.
100 ಕೋಟಿ ಅನುದಾನಕ್ಕೆ ಆಗ್ರಹ: ಲಿಂಗಾಯಿತ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸ್ವಾಗತಿಸಿ ಅವರು, ಒಕ್ಕಲಿಗ ಸಮುದಾಯಕ್ಕೂ ನಿಗಮ ಕೊಡಿ ಎಂದರು. ತಿಗಳ ಸಮುದಾಯಕ್ಕೂ ನಿಗಮ ಕೊಡಿ, ಜೊತೆಗೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
1ಎ ವರ್ಗಕ್ಕೆ ಸೇರಿಸಿ: ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಮಾತನಾಡಿ, ತಿಗಳ ಸಮಾಜ ಹೆಚ್ಚಿನದಾಗಿ ತರಕಾರಿ, ಹಣ್ಣು ಬೆಳೆಯುವುದನ್ನೇ ಕಸಬಾಗಿರಿಸಿಕೊಂಡಿದ್ದಾರೆ. ಬಹಳಷ್ಟು ಕುಟುಂಬಗಳು ಆರ್ಥಿಕವಾಗಿಹಿಂದಿವೆ. ರಾಜಕೀಯ ಪಕ್ಷಗಳು ಈ ಸಮುದಾಯವನ್ನು ಓಟ್ ಬ್ಯಾಂಕ್ ಮಾಡಿ ಕೊಂಡಿವೆ ಹೊರತು ಅಭಿವೃದ್ಧಿ ವಿಚಾರದಲ್ಲಿ ಕಡೆಗಣಿಸಿವೆ ಎಂಬು ಬೇಸರ ವ್ಯಕ್ತಪಡಿಸಿದರು. ತಿಗಳ ಸಮುದಾಯವನ್ನು 2ಎ ಕ್ಯಾಟಗರಿಯಿಂದ 1ಎ ಕ್ಯಾಟಗರಿಗೆ ಸೇರಿಸ ಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಮುಖಂಡರಾದ ನೆ.ಲ.ಮಹೇಶ್ ಕುಮಾರ್, ಶ್ರೀಕಾಂತ್ ಮಾತನಾಡಿ, ಜಿಲ್ಲೆಯಲ್ಲಿ 1 ಲಕ್ಷ ತಿಗಳ ಸಮುದಾಯದ ಜನಸಂಖ್ಯೆ ಇದೆ. ಆದರೆ, ಅದಕ್ಕೆ ತಕ್ಕ ಸ್ಥಾನ ಮಾನ ಮಾತ್ರ ಸಿಕ್ಕಿಲ್ಲ ಎಂದರು. ತಿಗಳ ಸಮುದಾಯದ ಪ್ರಮು ಖರಾದ ಎಂ.ಬಿ.ಕೃಷ್ಣಯ್ಯ, ನರಸಿಂಹಮೂರ್ತಿ, ಗುರುವೇಗೌಡ, ನಾಗರಾಜು, ಗುರುರಾಜ್, ಈಶ್ವರ್, ಕೃಷ್ಣಪ್ಪ ಮುಂತಾದವರು ಇದ್ದರು.