ಮದ್ದೂರು: ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಅಗರಲಿಂಗನದೊಡ್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕಿನ ಅಗರಲಿಂಗನದೊಡ್ಡಿ ಗ್ರಾಮದ ಬಳಿ ನಡೆಯುತ್ತಿರುವಮೈಸೂರು, ಬೆಂಗಳೂರು ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಜಮಾವಣೆಗೊಂಡ ಸ್ಥಳೀಯ ನಿವಾಸಿಗಳು, ರಸ್ತೆಯಲ್ಲಿಯೇ ಶಾಮೀಯಾನ ಹಾಕುವ ಮೂಲಕಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿಕೂಡಲೇ ಸರ್ವಿಸ್ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿದರು.
ಹೆದ್ದಾರಿ ಕಾಮಗಾರಿ ನಡೆಯಲು ಸ್ಥಳೀಯ ರೈತರಿಂದ ಜಮೀನು ಪಡೆದು ಯಾವುದೇ ತೊಂದರೆ ಉಂಟಾಗದಂತೆ ಸ್ಥಳೀಯರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದ್ದ ಅಧಿಕಾರಿಗಳು ಕಾಮಗಾರಿಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿನೀಡಿದ ಭರವಸೆ ಈಡೇರಿಸದೆ ಇಲ್ಲಸಲ್ಲದನೆಪವೊಡ್ಡುತ್ತಿದ್ದಾರೆಂದು ದೂರಿದರು.
ಗ್ರಾಮದಲ್ಲಿ ಸರ್ವಿಸ್ ರಸ್ತೆ ನೀಡದಕಾರಣ ಸ್ಥಳೀಯ ರೈತರು ತಮ್ಮಜಮೀನುಗಳಿಗೆ ತೆರಳಲು ಹಲವಾರು ಗ್ರಾಮಗಳನ್ನು ಬಳಸಬೇಕಾದ ಅನಿವಾರ್ಯತೆ ಬಂದೊದಗಿದ್ದು, ಜಾನುವಾರು, ಎತ್ತಿನಗಾಡಿ ಹಾಗೂ ಜಮೀನಿನಲ್ಲಿಯ ಬೆಳೆಗಳನ್ನು ಇತರೆಡೆಗೆಸಾಗಿಸಲು ಅನಾನುಕೂಲವಾಗಿದ್ದು,ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ಆಗ್ರಹಿಸಿದರು.
ಹಲವಾರು ಬಾರಿ ಅಧಿಕಾರಿಗಳಿಗೆಮತ್ತು ಚುನಾಯಿತ ಪ್ರತಿನಿಧಿಗಳಗಮನಕ್ಕೂ ತಂದಿದ್ದರೂ ನಿರ್ಲಕ್ಷಿಸಲಾಗುತ್ತಿದ್ದು, ಮೈಸೂರು,ಬೆಂಗಳೂರು ಹೆದ್ದಾರಿ ಕಾಮಗಾರಿಹಲವಾರು ಅವ್ಯವಸ್ಥೆಯಿಂದ ಕೂಡಿದ್ದುಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿಪರಿಶೀಲನೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಸ್ಥಳೀಯ ಮುಖಂಡರಾದ ಪುಟ್ಟಪ್ಪ,ಸಂತೋಷ್, ಅಭಿಷೇಕ್, ಬಾಬು,ನಂದೀಶ್, ರಮೇಶ್, ಸ್ವಾಮಿ, ರಾಮಯ್ಯ,ರಾಮಲಿಂಗಯ್ಯ, ಶಂಕರ್, ಸುನೀಲ್, ವಿನಯ್ ನೇತೃತ್ವ ವಹಿಸಿದ್ದರು.