Advertisement

ಆರೋಪಿಗಳ ಬಂಧನಕ್ಕೆ ಆಗ್ರಹ

10:24 AM Jul 20, 2020 | Suhan S |

ಚಿಕ್ಕಬಳ್ಳಾಪುರ: ಮುಂಬೈನಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ನಿವಾಸ ರಾಜಗೃಹದ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಡಿಸಬೇಕೆಂದು ದಲಿತ ಸೇನೆಯ ರಾಜ್ಯ ಉಪಾಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

Advertisement

ನಗರದ ದಲಿತ ಸೇನೆಯ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಡಾ.ಬಿ.ಆರ್‌. ಅಂಬೇಡ್ಕರ್‌ರಿಂದಲೇ ರಾಜಗೃ ಹವೆಂದು ನಾಮಕರಣಗೊಳ್ಳುವ ಜೊತೆಗೆ ಅವರ ಕುರಿತ ಮಾಹಿತಿ, ಬೃಹತ್‌ ಗ್ರಂಥಾಲಯ, ಸ್ಮಾರಕಗಳನ್ನು ಹೊಂದಿರುವ ಮನೆಯ ರಕ್ಷಣೆಗೆ ಅಲ್ಲಿನ ಸರ್ಕಾರವು ಒತ್ತು ನೀಡದಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂಬೈನ ಚೈತ್ಯಭೂಮಿ, ಜನ್ಮಭೂಮಿ, ದೀಕ್ಷಾಭೂಮಿ ಹಾಗೂ ದೆಹಲಿಯ ಸಂವಿಧಾನ ಭವನ, ಬೆಂಗಳೂರಿನಲ್ಲಿನ ಧಮ್ಮ ಭೂಮಿ, ಲಂಡನ್‌ನ ನಿವಾಸವನ್ನು ಅಂತಾರಾಷ್ಟ್ರೀಯ ಗೌರವ ಸ್ಮಾರಕಗಳಾಗಿರುವಂತೆ ರಾಜಗೃಹವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ದಲಿತ ಸೇನೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಎಸ್‌.ಮುರಳಿ ಮುಂದು ವರೆಯಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಜಿಲ್ಲಾಧ್ಯಕ್ಷ ತಿಮ್ಮರಾಜು, ಸುಜಾತಮ್ಮ, ಲಲಿತಮ್ಮ, ಮಂಜುನಾಥ್‌, ಶ್ರೀನಿವಾಸ್‌, ನರಸಿಂಹಮೂರ್ತಿ, ಪ್ರಕಾಶ್‌, ನರೇಂದ್ರ, ಮುನಿರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next