ತಿಪಟೂರು: ಎತ್ತಿನಹೊಳೆ ನೀರಿನಿಂದಲಾದರೂ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕೆಂದು ಆಗ್ರಹಿಸಿ ಎತ್ತಿನಹೊಳೆ ಹೋರಾಟ ಸಮಿತಿಯೊಂದಿಗೆ ನೂರಾರು ರೈತರು ತಾಲೂಕಿನ ನಾಗತೀಹಳ್ಳಿ ಗೇಟ್‌ನಿಂದ ಬಿದಿರೆಗುಡಿ ಮಾರ್ಗವಾಗಿ ತಿಪಟೂರು ಎಸಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿ ಮುತ್ತಿಗೆ ಹಾಕಲು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ತಾ. ಆಡಳಿತ ಬಿದರೆಗುಡಿ ಸರ್ಕಲ್‌ನಲ್ಲೇ ತಡೆಯೊಡ್ಡಿದ ಘಟನೆ ನಡೆಯಿತು.
ಚುನಾವಣಾ ನೀತಿ ಸಂಹಿತೆ ಹಾಗೂ ಪೊಲೀಸ್ ಕೊರತೆ ಬಗ್ಗೆ ತಾ. ಆಡಳಿತ ಹೋರಾಟಗಾರರ ಬಳಿ ಕಾನೂನು ಸುವ್ಯ ವಸ್ಥೆ ಕಾಪಾಡುವ ಬಗ್ಗೆ ಮಾತನಾಡಿ ಕಾಲ್ನಡಿಗೆ ಜಾಥಾವನ್ನು ಬಿದರೆ ಗುಡಿ ಸರ್ಕಲ್‌ನಲ್ಲೇ ಮುಕ್ತಾಯ ಗೊಳಿಸಬೇ ಕೆಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಹೋರಾಟಗಾರರು ಅಲ್ಲಿಯೇ ಸಭೆ ನಡೆಸಿದರು.
ಉಪವಿಭಾಗಾಧಿಕಾರಿ ಪರವಾಗಿ ತಹ ಶೀಲ್ದಾರ್ ಚಂದ್ರಶೇಖರಯ್ಯ ಮನವಿ ಸ್ವೀಕರಿಸಲು ಸ್ಥಳಕ್ಕೇ ಆಗಿಮಿಸಿದ್ದರು. ಸಭೆಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿ ಹಾಗೂ ರೈತ ಮುಖಂಡ ಸಿ.ಬಿ.ಶಶಿಧರ್ ಮಾತನಾಡಿ, ತಾಲೂಕಿನ ಮೂಲಕವೇ ಹೇಮಾವತಿ ನಾಲೆಯಲ್ಲಿ ಕಳೆದ 30 ವರ್ಷಗಳಿಂದಲೂ ನೀರು ಹರಿಯುತ್ತಿದ್ದರೂ ತಾಲೂಕಿನ ಯಾವ ಕೆರೆಗಳಿಗೂ ನೀರು ಹರಿಯಲಿಲ್ಲ. ನಗರಕ್ಕೆ ಕುಡಿಯುವ ನೀರಿನ ಸಲುವಾಗಿ ಈಚ ನೂರು ಕೆರೆ ಮತ್ತು ನೊಣವಿನಕೆರೆ ಹೋಬಳಿಯ ಒಂದೆರಡು ಕೆರೆಗಳಿಗಳು ಮಾತ್ರ ಪ್ರತಿ ವರ್ಷ ತುಂಬುತ್ತಿದ್ದು ಉಳಿದಂತೆ ತಾಲೂಕಿನ ಶೇ.90ರಷ್ಟು ಕೆರೆಗಳು ಹತ್ತಾರು ವರ್ಷಗಳಿಂದಲೂ ನೀರಿಲ್ಲದೆ ಒಣಗಿ ನಿಂತಿವೆ.
ಹೊನ್ನವಳ್ಳಿ ಹಾಗೂ ಕಸಬಾ ಹೋಬಳಿಯ ಕೆಲವೇ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ರೂಪಿಸಿದ್ದ ಹೊನ್ನವಳ್ಳಿ ಏತನೀರಾವರಿ ಯೋಜನೆ ಅವೈಜಾnನಿಕವಾಗಿರುವುದರಿಂದ ನೂರು ಕೋಟಿ ಹಣವನ್ನು ಸಮುದ್ರಕ್ಕೆ ಸುರಿದಂತಾಗಿದೆ. ಈ ಯೋಜನೆ ಚಾಲ್ತಿಯಾಗಿ 10 ವರ್ಷಗಳೇ ಕಳೆದಿದ್ದರೂ ಯಾವೊಂದೂ ಕೆರೆಗೂ ನೀರು ಹರಿಸಲಾಗಿಲ್ಲ. ಇಲ್ಲಿನ ಎಲ್ಲಾ ಜನಪ್ರತಿನಿಧಿಗಳೂ ಚುನಾವಣೆ ಸಮಯದಲ್ಲಿ ಮಾತ್ರ ಕೆರೆಗಳಿಗೆ ನೀರು ಹರಿಸುತ್ತೇವೆಂದು ರೈತರನ್ನು ವಂಚಿಸುತ್ತಲೇ ಅಧಿಕಾರ ಹಿಡಿಯುತ್ತಿದ್ದರೂ ಯಾರೊಬ್ಬರೂ ಈ ಬಗ್ಗೆ ಪ್ರಾಮಾಣಿಕ ಕೆಲಸ ಮಾಡದೆ ರೈತರನ್ನು ನಿರಂತರವಾಗಿ ವಂಚಿಸುತ್ತಲೇ ಇದ್ದಾರೆ. ಆದರೂ ಇಲ್ಲಿನ ರೈತರು ತಾಳ್ಮೆ, ಸಹನೆಯಿಂದ ಈವರೆಗೂ ಇದ್ದು ಈಗ ಜನಪ್ರತಿನಿದಿಗಳ ಸುಳ್ಳು, ಮೋಸಗಳ ಬಗ್ಗೆ ಸಿಡಿದೆದಿದ್ದು ಮುಂದಿನ ದಿನಗಳಲ್ಲಿ ಈ ಹೋರಾಟ ಉಗ್ರರೂಪ ಪಡೆಯುವುದೆಂದು ಎಚ್ಚರಿಕೆ ನೀಡಿದರು.
ಕೂಡಲೆ ಇಲ್ಲಿನ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೆರೆಗಳಿಗೆ ನೀರು ತುಂಬಿಸಲು ಸರ್ಕಾರದಿಂದ ನೀರು ಹಂಚಿಕೆ ಮಾಡಿಸಿಕೊಂಡು, ವಿಶ್ವೇಶ್ವರಯ್ಯ ನೀರಾವರಿ ನಿಗಮದಿಂದ ಸಣ್ಣ ನೀರಾವರಿ ಇಲಾಖೆಗಳ ಮೂಲಕ ನೀರು ಹರಿಸಲು ಯೋಜನೆ ರೂಪಿಸುವ ಕೆಲಸಕ್ಕೆ ಮುಂದಾಗಬೇಕಲ್ಲದೆ ಭೂಮಿಕಳೆದುಕೊಳ್ಳುತ್ತಿರುವರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಎತ್ತಿನಹೊಳೆ ಹೋರಾಟ ಸಮಿತಿ ಅಧ್ಯಕ್ಷ ದೇವರಾಜು, ರೈತ, ಕೃಷಿ ಕಾರ್ಮಿಕ ಸಂಘಟನೆ ತಾ. ಅಧ್ಯಕ್ಷ ಎಸ್.ಎನ್. ಸ್ವಾಮಿ, ಮುಖಂಡ ಕುಂದೂರು ತಿಮ್ಮಯ್ಯ, ಜಿಪಂ ಸದಸ್ಯ ಜಿ. ನಾರಾಯಣ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಎತ್ತಿನಹೊಳೆ ಹೋರಾಟ ಮುಖಂಡರುಗಳಾದ ಮನೋಹರ್ ಪಟೇಲ್, ಬಿ.ಬಿ. ಸಿದ್ಧಲಿಂಗ ಮೂರ್ತಿ, ಕನ್ನಡಪರ ಹೋರಾಟಗಾರ ವಿಜಯ್‌ಕುಮಾರ್, ಯೋಗಾ ನಂದಸ್ವಾಮಿ, ನಾಗತೀಹಳ್ಳಿ ಜಯಣ್ಣ, ಪ್ರಸಾ ದ್, ಶಿವಪ್ರಕಾಶ್, ಗಂಗಾಧರ್, ಹೊನ್ನ ವಳ್ಳಿ ಹೋರಾಟ ಸಮಿತಿ ಚಂದ್ರೇ ಗೌಡ, ನಾಗತೀಹಳ್ಳಿ ಕೃಷ್ಣಮೂರ್ತಿ ಇದ್ದರು.