Advertisement

“ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತುರ್ತು ಕ್ರಮ’

04:03 PM Mar 18, 2017 | Team Udayavani |

ಕಾಪು: ಬೇಸಗೆ ಕಾಲ ಸಮೀಪಿಸುತ್ತಿದ್ದಂತೆಯೇ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದ್ದು, ಸಮಸ್ಯೆಯ ಪರಿಹಾರಕ್ಕಾಗಿ ಟಾಸ್ಕ್ಫೋರ್ಸ್‌ ಮೂಲಕ ವಿಶೇಷ ಅನುದಾನವನ್ನು ಬಳಸಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ಈಗಾಗಲೇ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಮಾಜಿ ಸಚಿವ / ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಹೇಳಿದರು.

Advertisement

ಮಾ. 14ರಂದು ಕಟಪಾಡಿ ಗ್ರಾ. ಪಂ. ವ್ಯಾಪ್ತಿಯ ಜೆ. ಎನ್‌. ನಗರ ಕಾಲೊನಿಯಲ್ಲಿ ಶಾಸಕರ ತುರ್ತು ಅನುದಾನದ 5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಕೊಳವೆ ಬಾವಿ ಹಾಗೂ ನಳ್ಳಿನ ನೀರಿನ ಸೌಲಭ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಟಪಾಡಿ ಜೆ. ಎನ್‌. ನಗರ ಕಾಲೊನಿಯ ಜನರು ಕುಡಿಯುವ ನೀರಿಗಾಗಿ ಭಾರೀ ಕಷ್ಟ ಪಡುವಂತಾಗಿದ್ದು, ಪ್ರತೀ ಮನೆಗೂ ನಳ್ಳಿನ ನೀರಿನ ಸೌಲಭ್ಯವನ್ನು ಒದಗಿಸಲು ಪ್ರಯತ್ನಿಸಲಾಗುವುದು. ಮಾತ್ರವಲ್ಲದೇ ನೀರಿನ ಒರತೆಯನ್ನು ಗಮನಿಸಿಕೊಂಡು ತೆರೆದ ಬಾವಿ ಅಥವಾ ಕೊಳವೆ ಬಾವಿ ರಚನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಉಡುಪಿ ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಜಿ. ಪಂ. ಮಾಜಿ ಅಧ್ಯಕ್ಷೆ ಸರಸು ಬಂಗೇರ, ಮಾಜಿ ತಾ. ಪಂ. ಸದಸ್ಯರಾದ ಶೀÅಕರ ಅಂಚನ್‌, ಉದಯ ಶೆಟ್ಟಿ, ಕಟಪಾಡಿ ಗ್ರಾ. ಪಂ. ಅಧ್ಯಕ್ಷ ಜೂಲಿಯಟ್‌ ವೀರಾ ಡಿ. ಸೋಜ, ಉಪಾಧ್ಯಕ್ಷೆ ಪ್ರಭಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ವಿನಯ ಬಲ್ಲಾಳ್‌, ಅಶೋಕ್‌ ರಾವ್‌, ಪ್ರೇಮ್‌ ಕುಮಾರ್‌, ಕೋಟೆ ಗ್ರಾ. ಪಂ. ಮಾಜಿ ಅಧ್ಯಕ್ಷ ದಯಾನಂದ ಬಂಗೇರ, ಗ್ರಾ. ಪಂ. ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next