ದಾವಣಗೆರೆ: 13ನೇ ವಾರ್ಡ್‌ನ ಕೆ.ಆರ್. ರಸ್ತೆಯಲ್ಲಿರುವ ಉದ್ಯಾನವನದ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಪ್ರತಿಭಟಿಸಿದ್ದಾರೆ.
ಕೆ.ಆರ್. ರಸ್ತೆಯಲ್ಲಿರುವುದು ದಕ್ಷಿಣ ಭಾಗದ ಏಕೈಕ ಉದ್ಯಾನವನವಾಗಿದೆ. 60-70 ವರ್ಷದ ಇತಿಹಾಸ ಹೊಂದಿರುವ ಈ ಉದ್ಯಾನವನ ಸೂಕ್ತ ನಿರ್ವಹಣೆಇಲ್ಲ. ಮರ-ಗಿಡಗಳು ನಾಪತ್ತೆಯಾಗಿ ಹಲವಾರು ವರ್ಷವೇ ಕಳೆದಿವೆ. ಪಾರ್ಕ್ ದಿನದಿಂದ ದಿನಕ್ಕೆ ಅನೈತಿಕ ತಾಣವಾಗಿ ಮಾರ್ಪಡುತ್ತಿದೆ.
ಆದರೆ, ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದಕ್ಷಿಣ ಭಾಗದಲ್ಲಿರುವ ಉದ್ಯಾನವನದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಈಗಲೂ ನಗರಪಾಲಿಕೆ ಪಾರ್ಕ್ ಅಭಿವೃದ್ಧಿ ಪಡಿಸಿ, ಸೂಕ್ತ ಬಂದೋಬಸ್ತ್ ಮಾಡದೇ ಹೋದಲ್ಲಿ ಕೆಲವೇ ದಿನಗಳಲ್ಲಿ ಪಾರ್ಕ್ ಒತ್ತುವರಿ ಆಗುವುದು ಶತಃ ಸಿದ್ಧ.
ಸ್ಮಾರ್ಟ್‌ಸಿಟಿ ಆಗುವ ಪ್ರದೇಶದಲ್ಲಿರುವ ಪಾರ್ಕ್‌ನ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪಾರ್ಕ್‌ನಲ್ಲಿರುವ ಬೃಹತ್ ಟ್ಯಾಂಕ್‌ಗಳ ಸ್ವತ್ಛತೆ ಮಾಡದೆ ಹತ್ತಾರು ವರ್ಷವೇ ಆಗಿವೆ. ಅದೇ ಟ್ಯಾಂಕ್ ನೀರನ್ನು ಜನರು ಬಳಸುವಂತಾಗಿದೆ. ನೀರಿನಲ್ಲಿ ಹುಳ ಹುಪ್ಪಡಿ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ.
ಟ್ಯಾಂಕ್ ಸ್ವತ್ಛತೆ ಮಾಡುವಂತೆ ಹಲವಾರು ಬಾರಿ ಮಾಡಿಕೊಂಡ ಮನವಿಗೆ ಯಾವುದೇ ಪ್ರಯೋಜನವಾಗಿಲ್ಲ. ಮಹಾನಗರ ಪಾಲಿಕೆ ಟ್ಯಾಂಕ್ ಸ್ವತ್ಛತೆಗೆ ಗಮನ ನೀಡಬೇಕು ಎಂದು ಒತ್ತಾಯಿಸಿದರು. ಅರಳಿಮರ ವೃತ್ತದಿಂದ ಮಹಾನಗರ ಪಾಲಿಕೆವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಆಯುಕ್ತ ಬಿ.ಎಚ್. ನಾರಾಯಣಪ್ಪಗೆ ಮನವಿ ಸಲ್ಲಿಸಿ, ಪಾರ್ಕ್ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಆಯುಕ್ತ ಬಿ.ಎಚ್. ನಾರಾಯಣಪ್ಪ, ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಸಂಘಟನೆ ಜಿಲ್ಲಾ ಅಧ್ಯಕ್ಷ ಸ.ಗು. ಶಿವಕುಮಾರ್, ಮಹಿಳಾ ಘಟಕದ ಶುಭಲತಾ, ಶಬೀºರ್ ಅಹ್ಮದ್, ಎಂ. ಅನ್ವರ್ ಹುಸೇನ್, ಸಲೀಂಬಾಯಿ, ಜಬೀಖಾನ್, ದೇವರಾಜ್‌ಸ್ವಾಮಿ, ರವಿನಾಯಕ್, ಫೈಜುಲ್ಲಾ, ಫಯಾಜ್ ಜಮೀಲ್, ಮೊಹಿದೀªನ್, ಅಬ್ದುಲ್ ರಷೀದ್, ಶಾಹಿದ್, ಷμ ಇದ್ದರು.