ನವದೆಹಲಿ: ಕೇಂದ್ರ ತಂದಿರುವ ಕೃಷಿ ಸಂಬಂಧಿತ ಎರಡು ಮಸೂದೆಗಳಿಗೆ ತಮ್ಮ ಅಂಕಿತ ಹಾಕದಂತೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಮನವಿ ಮಾಡಿದ್ದಾರೆ.
ಕೃಷಿ ಮಸೂದೆಗೆ ಸಹಿ ಮಾಡಬಾರದು ಮಾತ್ರವಲ್ಲದೆ ಅದನ್ನು ಮರುಪರಿಶೀಲನೆಗಾಗಿ ಸಂಸತ್ತಿಗೆ ಕಳುಹಿಸಬೇಕು. ದಯವಿಟ್ಟು ರೈತರು, ಕಾರ್ಮಿಕರು, ಮಂಡಿ ಕಾರ್ಮಿಕ ಮತ್ತು ದಲಿತರ ಪರವಾಗಿ ಮಧ್ಯಪ್ರವೇಶಿಸಿ, ಇಲ್ಲವಾದಲ್ಲಿ ಅವರು ಎಂದಿಗೂ ನಮ್ಮನ್ನು ಕ್ಷಮಿಸುವುದಿಲ್ಲ. ಪ್ರಜಾಪ್ರಭುತ್ವ ಎಂದರೆ ಒಮ್ಮತ, ದಬ್ಬಾಳಿಕೆ ಅಲ್ಲ. ‘ಅನ್ನದಾತ’ ಹಸಿವಿನಿಂದ ಬಳಲುವುದು ಮತ್ತು ಸಮಸ್ಯೆಗಳಿಗೆ ತುತ್ತಾಗಿ ರಸ್ತೆಗಳಲ್ಲಿ ಮಲಗಲು ಕಾರಣವಾದರೆ ಅದು ಪ್ರಜಾಪ್ರಭುತ್ವಕ್ಕೆ ದುಃಖದ ದಿನ ಎಂದು ಬಾದಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕೃಷಿ ಮಸೂದೆ “ರೈತ ವಿರೋಧಿ” ನೀತಿಗಳಿಂದ ಕೂಡಿದೆ ಎಂದು ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ರಾಜ್ಯಸಭೆಯಲ್ಲಿ ಧ್ವನಿಮತಗಳಿಂದ ಭಾನುವಾರ ಮಸೂದೆಗಳನ್ನು ಅಂಗೀಕರಿಸಲಾಗಿತ್ತು.
Related Articles
ಲೋಕಸಭೆಯಲ್ಲಿ ಕೃಷಿ ಮಸೂದೆಯನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಸಚಿವ ಸ್ಥಾನಕ್ಕೂ ರಾಜಿನಾಮೆ ನೀಡಿದ್ದರು. ಮಸೂದೆಯ ವಿರುದ್ಧ ಪಂಜಾಬ್, ಹರಿಯಾಣ ಸೇರಿದಂತೆ ಹಲವೆಡೆ ಪ್ರತಿಭಟನೆಗೆಳು ನಡೆಯುತ್ತಿದೆ.