Advertisement

ನೆರೆ ಸಂತ್ರಸ್ತರಿಗೆ ನಗರ ಪೊಲೀಸರ ನೆರವು

01:19 AM Aug 12, 2019 | Team Udayavani |

ಬೆಂಗಳೂರು: ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಶಿವಮೊಗ್ಗ, ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳ ಸಂತ್ರಸ್ತರತ್ತ ರಾಜಧಾನಿ ಪೊಲೀಸರು ನೆರವಿನ ಹಸ್ತ ಚಾಚಿದ್ದಾರೆ. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡುವಂತೆ ಚಿಕ್ಕಜಾಲ ಠಾಣೆ ಪೊಲೀಸರು ಭಾನುವಾರ ಮಾಡಿರುವ ಮನವಿಗೆ ಓಗೊಟ್ಟ ಸಾರ್ವಜನಿಕರು, ಅಕ್ಕಿ, ರಾಗಿ, ಗೋಧಿ ಹಿಟ್ಟು ಮತ್ತಿತರ ಹಾರ ಸಾಮಗ್ರಿ, ಅಗತ್ಯ ವಸ್ತುಗಳನ್ನು ಠಾಣೆಗೆ ತಲುಪಿಸುತ್ತಿದ್ದಾರೆ.

Advertisement

ನೆರೆ ಸಂತ್ರಸ್ತರಿಗೆ ತುರ್ತಾಗಿ ಬೇಕಾಗಿರುವ ಹಾಸಿಗೆ, ಹೊದಿಕೆ, ಒಳ ಉಡುಪು, ಸ್ಯಾನಿಟರಿ ಪ್ಯಾಡ್‌, ಮಹಿಳೆ, ಪುರುಷ ಹಾಗೂ ಮಕ್ಕಳ ಉಡುಪು, ಸ್ವೆಟರ್‌ ಸೇರಿ ಅಗತ್ಯ ಸಾಮಗ್ರಿಗಳನ್ನು ನೀಡಲು ಪೊಲೀಸರು ಮನವಿ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಹಲವು ಮಂದಿ ಸಾರ್ವಜನಿಕರು 40 ಮೂಟೆಗೂ ಅಧಿಕ ಅಕ್ಕಿ, 4 ಮೂಟೆ ರಾಗಿ, ಬಿಸ್ಕತ್ತು ಸೇರಿ ಎಲ್ಲ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

ಡಿಸಿಪಿ ಹಾಗೂ ಎಸಿಪಿ ಮಾರ್ಗದರ್ಶನದಲ್ಲಿ ಠಾಣೆ ಸಿಬ್ಬಂದಿಯ ಸಹಕಾರದಿಂದ ಸಂಗ್ರಹವಾಗಿರುವ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಹಂತ ಹಂತವಾಗಿ ತಲುಪಿಸಲಾಗುತ್ತದೆ ಎಂದು ಚಿಕ್ಕಜಾಲ ಠಾಣೆಯ ಇನ್ಸ್‌ಪೆಕ್ಟರ್‌ ಟಿ.ಮುತ್ತುರಾಜ್‌ ತಿಳಿಸಿದರು.

ಹಣ ಸ್ವೀಕರಿಸುವುದಿಲ್ಲ: ಸಂತ್ರಸ್ತರ ನೆರವಿಗೆ ಅಗತುವಿರುವ ವಸ್ತುಗಳನ್ನು ಸಾರ್ವಜನಿಕರು ತಂದು ಠಾಣೆಗೆ ಕೊಡಬಹುದು. ಅವುಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸಲಾಗುತ್ತದೆ. ಆದರೆ, ದಾನಿಗಳಿಂದ ಹಣ ಸ್ವೀಕರಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next