ನವದೆಹಲಿ: ರಾಜಕೀಯ ಬೆಂಬಲ ಹೊಂದಿರುವ ನಗರ ನಕ್ಸಲರು ಮತ್ತು ಅಭಿವೃದ್ಧಿ ವಿರೋಧಿ ಶಕ್ತಿಗಳು ಗುಜರಾತ್ ನ ನರ್ಮದಾ ನದಿಯ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಹಲವು ವರ್ಷಗಳ ಕಾಲ ಸ್ಥಗಿತಗೊಳಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ:ಹೀರೋ ಆದ್ರು ಕೆಜಿಎಫ್ ತಾತ..! ನ್ಯಾನೋದಲ್ಲಿ ನಾರಾಯಣಪ್ಪ ಎಂಟ್ರಿ
ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಿಸುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂಬುದಾಗಿ ನಗರ ನಕ್ಸಲರು ಪ್ರಚಾರ ಮಾಡಿರುವುದಾಗಿ ಹೇಳಿದರು.
ಗುಜರಾತ್ ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿ ಪರಿಸರ ಖಾತೆ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತ, ನಗರ ನಕ್ಸಲೀಯರು ಮತ್ತು ಅಭಿವೃದ್ಧಿ ವಿರೋಧಿ ಶಕ್ತಿಗಳಿಂದಾಗಿ ನರ್ಮದಾ ಅಣೆಕಟ್ಟು ನಿರ್ಮಾಣ ವಿಳಂಬವಾಗುವ ಮೂಲಕ ಬೃಹತ್ ಪ್ರಮಾಣದ ಹಣ ನಷ್ಟವಾಗುವಂತಾಗಿತ್ತು. ಇದೀಗ ಅಣೆಕಟ್ಟು ನಿರ್ಮಾಣಗೊಂಡಿದ್ದು, ಈಗ ನಗರ ನಕ್ಸಲೀಯರ ಆರೋಪದ ಬಗ್ಗೆ ನೀವೇ ಚೆನ್ನಾಗಿ ವಿಶ್ಲೇಷಿಸಬಹುದಾಗಿದೆ ಎಂದು ಹೇಳಿದರು.
ಈ ನಗರ ನಕ್ಸಲೀಯರು ಈಗಲೂ ಸಕ್ರಿಯರಾಗಿದ್ದಾರೆ. ಅಭಿವೃದ್ಧಿ ಹಾಗೂ ಜೀವನ ಸುಗಮಗೊಳಿಸಲು ಉದ್ದೇಶಿಸಿರುವ ಯೋಜನೆಗಳನ್ನು ಪರಿಸರದ ಹೆಸರಿನಲ್ಲಿ ಅನಗತ್ಯವಾಗಿ ಸ್ಥಗಿತಗೊಳ್ಳದಂತೆ ಎಚ್ಚರವಹಿಸಬೇಕೆಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದ ಪ್ರಧಾನಿ ಮೋದಿ, ಅಂತಹ ಜನರ ಪಿತೂರಿಯನ್ನು ಸಮತೋಲನದಿಂದ ಎದುರಿಸಬೇಕಾಗಿದೆ ಎಂದರು.