ಹೊಸದಿಲ್ಲಿ: ಮದುವೆ ಎಂಬುವುದು ಜೈವಿಕವಾಗಿ ಹುಟ್ಟಿರುವ ಗಂಡು ಮತ್ತು ಹೆಣ್ಣಿನ ನಡುವೆ ನಡೆಯುವಂಥದ್ದು. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದರೆ ಹಾಗೂ ಅದನ್ನು “ಮದುವೆ’ ಎಂಬ ಪರಿಕಲ್ಪನೆಗೆ ಸಮಾನವಾದದ್ದು ಎಂದು ಭಾವಿಸಿದರೆ, ಅದು ಪ್ರತಿಯೊಬ್ಬ ನಾಗರಿಕನ ಹಿತಾಸಕ್ತಿಯ ಮೇಲೂ ಗಂಭೀರ ಪರಿ ಣಾಮ ಬೀರುತ್ತದೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಮುಂದೆ ಕೇಂದ್ರ ಸರಕಾರ ಮಂಡಿಸಿದ ವಾದವಿದು. ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ಸಲಿಂಗ ವಿವಾಹವನ್ನು ಖಂಡಿಸಿ ಸೋಮವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಜತೆಗೆ ಮಂಗಳವಾರ ದಿಂದ ಈ ಬಗ್ಗೆ ವಿಚಾರಣೆ ನಡೆಸುವು ದಾಗಿ ನ್ಯಾಯಪೀಠ ಒಪ್ಪಿಕೊಂಡಿದೆ.
ನ್ಯಾಯಾಂಗ ದೂರ ಉಳಿಯಲಿ: “ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿ ನ್ಯಾಯಾಲಯವು ಆದೇಶ ಹೊರಡಿಸಿ ದರೆ, ಅದು ಒಂದಿಡೀ ಕಾನೂನಿನ ಶಾಖೆ ಯನ್ನೇ ಮರುವ್ಯಾಖ್ಯಾನ ಮಾಡಿದಂತಾ ಗುತ್ತದೆ. ವಿವಾಹ ಎಂಬ ಸಾಮಾಜಿಕ- ನ್ಯಾಯಿಕ ಸಂಬಂಧವು ಸಾಂಪ್ರದಾಯಿಕ ಮತ್ತು ಸಾರ್ವತ್ರಿಕವಾಗಿ ಸ್ವೀಕಾರಾರ್ಹವಾ ಗಿರುವಂಥದ್ದು ಅದು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದೆ. ಅದು ಹಿಂದೂ ಕಾನೂನಿನಲ್ಲಿ ಪವಿತ್ರ ವಾದದ್ದು ಎಂದೂ ಪರಿಗಣಿಸ ಲ್ಪಟ್ಟಿದೆ. ಇಸ್ಲಾಂ ಧರ್ಮದಲ್ಲೂ, ಮದುವೆ ಎನ್ನುವುದು ಒಂದು ಒಪ್ಪಂದವಾಗಿದ್ದರೂ, ಅಲ್ಲೂ ಒಬ್ಬ ಪುರುಷ ಮತ್ತು ಮಹಿಳೆಯ ನಡುವೆ ನಡೆಯುವುದನ್ನಷ್ಟೇ ವಿವಾಹ ಎಂದು ಪರಿ ಗಣಿಸಲಾಗುತ್ತದೆ. ಹೀಗಾಗಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಆದೇಶ ದಿಂದ ನ್ಯಾಯಾಲಯಗಳು ದೂರ ಉಳಿ ದರೆ ಉತ್ತಮ’ ಎಂದು ಸರಕಾರ ಹೇಳಿತು.
ಇದೇ ವೇಳೆ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಗಳು, ನಗರ ಪ್ರದೇಶಗಳ ಆಯ್ದ ಗಣ್ಯರ ದೃಷ್ಟಿಕೋನ ದಿಂದ ಕೂಡಿದೆ. ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ಅವರು ಇಂಥ ಅರ್ಜಿ ಗಳನ್ನು ಸಲ್ಲಿಸಿರುತ್ತಾರೆ. ಆದರೆ ಈ ವಿಚಾರದಲ್ಲಿ ಎಲ್ಲ ಗ್ರಾಮೀಣ, ಅರೆ ಗ್ರಾಮೀಣ ಮತ್ತು ನಗರದ ಜನರ ಅಭಿ ಪ್ರಾಯಗಳು, ಧಾರ್ಮಿಕ ಪಂಗಡಗಳ ದೃಷ್ಟಿಕೋನಗಳನ್ನು ಸಂಗ್ರಹಿಸಿ ಸಂಸತ್ತೇ ತೀರ್ಮಾನ ತೆಗೆದುಕೊಳ್ಳಬೇಕು ಎಂದೂ ಸರಕಾರ ಅಭಿಪ್ರಾಯಪಟ್ಟಿದೆ.