Advertisement
ಇಂಥ ಯೋಚನೆಗಳ ಮಧ್ಯೆಯೂ ಮಕ್ಕಳನ್ನು ಎಡ್ಮಂಡ್ ಹಿಲರಿ ಮಾಡಿಸುವ ಕನಸು ಇಟ್ಕೊಂಡ ಪೋಷಕರಿಗೆ ಇದು ಸ್ವೀಟ್ ನ್ಯೂಸ್. ಪರ್ವತಾರೋಹಣ, ಟ್ರಕ್ಕಿಂಗ್ ಪಾಠ ಹೇಳಿಕೊಡಲೆಂದೇ “ಅರ್ಬನ್ ಕ್ಲೈಂಬರ್ಸ್’ ಕೆಲಸ ಮಾಡ್ತಿದೆ. ಇಲ್ಲಿ ಮಕ್ಕಳ ಸ್ಪೈಡರ್ ಮ್ಯಾನ್ ಆಗುವ ಕನಸನ್ನು ನನಸು ಮಾಡ್ತಾರೆ. ಕೆಲವೇ ದಿನಗಳ ತರಬೇತಿಯಲ್ಲಿ ಮಕ್ಕಳು ಚಕಚಕ ಅಂತ ಪರ್ವತ ಏರುವುದನ್ನು, ಗೋಡೆ ಹತ್ತುವುದನ್ನು ಕಲೀತಾರೆ!
– ಹಗ್ಗ ಹಿಡಿದು ಬಿಲ್ಡಿಂಗ್ ಏರುವುದನ್ನು ನೀವು ಟಿವಿ, ಜಾಹೀರಾತುಗಳಲ್ಲಿ ನೋಡಿದ್ದೀರಿ. ಇಲ್ಲೂ ಅಂಥ ಬಿಲ್ಡಿಂಗ್‌ನ ಗೋಡೆಗಳಿವೆ. ಅಲ್ಲಲ್ಲಿ ಉಕ್ಕಿನ ಕಿರು ಆಧಾರಗಳನ್ನು ಫಿಕ್ಸ್ ಮಾಡಿದ್ದಾರೆ. ಮೇಲೊಂದು ಹಗ್ಗ ಕಟ್ಟಿರುತ್ತಾರೆ. ಆ ಹಗ್ಗ ಹಿಡಿದು ಚಕಚಕನೆ ಕಟ್ಟಡವನ್ನು ಏರಬಹುದು. 24ರಿಂದ 48 ಅಡಿ ಎತ್ತರದ ಬಿಲ್ಡಿಂಗುಗಳನ್ನು ಹುಡುಗರು ಯಾವುದೇ ಭಯವಿಲ್ಲದೆ ಏರುವುದನ್ನು ಇಲ್ಲಿ ಕಣ್ಣಾರೆ ಕಾಣಬಹುದು. – ರಾಮನಗರದ ಬೆಟ್ಟದ ಮೇಲೆ ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ನೋಡಿರುತ್ತೀರಿ. ಅವನ್ನು ಏರಲಾರದೆ, ಉಸ್ಸಪ್ಪ ಎಂದಿರುತ್ತೀರಿ. ಇಲ್ಲೂ 8- 12 ಅಡಿ ಎತ್ತರದ ಕಲ್ಲುಬಂಡೆ ಇಟ್ಟಿರುತ್ತಾರೆ. ತಲೆಗೆ ಹೆಲ್ಮೆಟ್ ಧರಿಸಿ, ಬಂಡೆ ಏರುವುದನ್ನು ಇಲ್ಲಿ ಕಲಿಸಲಾಗುತ್ತೆ.
Related Articles
Advertisement
ಮನೋಸ್ಥೈರ್ಯದ ಪಾಠಇಲ್ಲಿಗೆ ಬರುವ ಅನೇಕ ಮಕ್ಕಳಿಗೆ ಆಸಕ್ತಿ, ಉತ್ಸಾಹ ಏನೋ ಇರುತ್ತೆ. ಆದ್ರೆ, ಇಷ್ಟೆತ್ತರ ಹತ್ತಬೇಕಲ್ಲ ಎಂದು ಮೇಲೆ ನೋಡುತ್ತಾ ಧೈರ್ಯಗೆಡುತ್ತಾರೆ. ಇದ್ದಕ್ಕಿದ್ದಂತೆ ಕೈಕಾಲು ಕಂಪಿಸಲೂಬಹುದು. ಇಂಥ ಮಕ್ಕಳ ಆತಂಕವನ್ನೂ ಇಲ್ಲಿ ದೂರ ಮಾಡ್ತಾರೆ. ಮನೋಸ್ಥೈರ್ಯದ ಪಾಠವನ್ನು ಇಲ್ಲಿ ಹೇಳಿಕೊಡ್ತಾರೆ. ಕೇವಲ ಮಕ್ಕಳಲ್ಲ, ಈ ಆರೋಹಣಾ ತರಬೇತಿ ಶಾಲೆಯಲ್ಲಿ ಯುವತಿಯರೂ ಕಾಣಿಸುತ್ತಾರೆ. ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅನೇಕ ಹೆಣ್ಮಕ್ಕಳು ಇಲ್ಲಿ ಆರೋಹಣ ಪಾಠ ಕಲಿಯುತ್ತಾರೆ. ಎಲ್ಲ ತರಬೇತುದಾರರಿಗೂ ಸುರಕ್ಷಾ ಸಾಧನಗಳನ್ನು ಅಳವಡಿಸಿಯೇ, ತರಬೇತಿ ನೀಡಲಾಗುತ್ತೆ. ಎಲ್ಲಿದೆ?
ಸ್ಪ್ರಿಂಗ್ ಫೀಲ್ಡ್, ಸರ್ಜಾಪುರ ರಸ್ತೆ, ಬೆಂಗಳೂರು- 560102
ಏಕೆ ಹೋಗ್ಬೇಕು ಅಂದ್ರೆ…
– ಕಟ್ಟಡ, ಬಂಡೆ ಏರುವುದನ್ನು ಕಲಿಯಲು
– ಅಪಾಯಕಾರಿ ಸನ್ನಿವೇಶದಲ್ಲಿ ಸಾಹಸ ಪ್ರದರ್ಶಿಸುವುದನ್ನು ಅಭ್ಯಸಿಸಲು
– ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು
– ಪರ್ವತಾರೋಹಣಕ್ಕೆ ಇದೊಂದು ಇಂಟರ್ನ್ಶಿಪ್ ಇದ್ದಹಾಗೆ ಸಂಪರ್ಕ
ಮೊ. 096633 67391 ವೆಬ್‌ಸೈಟ್ //urbanclimbers.in/ ಫೇಸ್‌ಬುಕ್ @Urbanclimbers.in