ಕುರುಗೋಡು: ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಇಂದು ಮತ್ತು ನಾಳೆ ಎರಡು ದಿನ ಗ್ರಾಮದ ಆರಾಧ್ಯ ದೇವರಾದ ಉಡಸಳಮ್ಮ ದೇವಿ ಕುಂಭೋತ್ಸವ ಹಾಗೂ ಊರ ಹಬ್ಬ ನಡೆಯಲಿದೆ.
ಬಾದನಹಟ್ಟಿ ಸೇರಿ ಐದು ಗ್ರಾಮದಲ್ಲಿ ದೇವಿಯರ ಕುಂಭೋತ್ಸವ ಮತ್ತು ಊರ ಹಬ್ಬ ಜರುಗಲಿದೆ.
ಅದರಲ್ಲಿ ಬಾದನಹಟ್ಟಿ ಗ್ರಾಮದ ಉಡಸಲಮ್ಮ, ವದ್ದಟ್ಟಿ ಗ್ರಾಮದ ದುಗ್ಲಮ್ಮ, ಶಾನವಾಸಪುರದ, ಸಿಂದಿಗೇರಿ ಮತ್ತು ಬೈಲೂರು ಸೇರಿದಂತೆ ಸುಂಕ್ಲಮ್ಮ ದೇವಿಯರ ಹಬ್ಬ ನೆರವೇರಲಿದೆ.
ಕುಂಭೋತ್ಸವ : ಗ್ರಾಮದಲ್ಲಿ ವಾಸಿಸುವ ಎಲ್ಲರೂ ಜಾತಿ ಬೆದವಿಲ್ಲದೆ ಮನೆಗೊಂದರಂತೆ ಉಡಸಲಮ್ಮ ದೇವಿಗೆ ಬೆಳಿಗ್ಗೆ ಯಿಂದ ರಾತ್ರಿ ವರೆಗೆ ಸಾವಿರಾರು ಸಂಖ್ಯೆಯಲ್ಲಿ ಕುಂಭ ಸಮರ್ಪಿಸುತ್ತಾರೆ.
ಮೇಟಿ ಹಿರೇ ಕುಂಭ : ಕುಂಬೊತ್ಸವದಲ್ಲಿ ಆಕರ್ಷಣೆಯಾದ ಕುಂಭದಲ್ಲಿ ಅನ್ನ ಮತ್ತು ಹೋಳಿಗೆ ಸೇರಿ 101 ಕೆಜಿ ತೂಕ ವಿರುವ ಹಿರೇಕುಂಭ ವನ್ನು ದೇವರಮನೆ ಕುಟುಂಬದ ವಾಲ್ಮೀಕಿ (ನಾಯಕ ) ಸಮುದಾಯದವರು ಹೊತ್ತು ತರುತ್ತಾರೆ.ಮಧ್ಯ ರಾತ್ರಿ 1.30 ಕ್ಕೆ ಆರಂಭವಾಗುವ ಮೆರವಣಿಗೆ ಬೆಳಿಗ್ಗೆ 5 ರ ಸುಮಾರಿಗೆ ಡೊಳ್ಳು, ಕಳಸ, ಮೇಳ ಮತ್ತು ಮಂಗಲವಾದ್ಯದೊಂದಿಗೆ ದೇವಸ್ಥಾನ ಸೇರಲಿದೆ.
ಕುರುಬ ಸಮುದಾಯದವರು ಹಿರೇಕುಂಭ ಸ್ವಾಗತಿಸುವ ಜವಾಬ್ದಾರಿ ವಹಿಸುತ್ತಾರೆ.
ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ದೇವಸ್ಥಾನ ಕ್ಕೆ ಮೇಟಿ ಹಿರೇಕುಂಬಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಗ್ರಾಪಂ ಇಲಾಖೆ ಯಿಂದ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಉಡಸಲಮ್ಮ ದೇವಿಯ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಕಾರ್ಯಗಳು ಜರುಗಿದವು.