Advertisement

ಮಕ್ಕಳ ವರ್ತನೆಯಿಂದ ಬೇಸರ; ಅರ್ಧದಷ್ಟು ಆಸ್ತಿಯನ್ನು ಸಾಕುನಾಯಿ ಹೆಸರಿಗೆ ಬರೆದ ರೈತ

09:09 AM Jan 01, 2021 | Team Udayavani |

ಮಧ್ಯಪ್ರದೇಶ: ತನ್ನ ಪುತ್ರರ ನಡವಳಿಕೆಯಿಂದ ಬೇಸೆತ್ತು ವ್ಯಕ್ತಿಯೊಬ್ಬ , ತನ್ನ ಅರ್ಧದಷ್ಟು ಆಸ್ತಿಯನ್ನು ಸಾಕುನಾಯಿಗೆ ವಿಲ್ ಬರೆದ ಘಟನೆ  ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.

Advertisement

ತನ್ನ ಇಬ್ಬರು ಗಂಡು ಮಕ್ಕಳ ವರ್ತನೆಯಿಂದ ತೀವ್ರ ಅಸಮಾಧಾನಗೊಂಡಿದ್ದ 50 ವರ್ಷದ ಓಂ ನಾರಾಯಣ್ ಎಂಬ ರೈತ, ತನ್ನ ಅರ್ಧದಷ್ಟು ಆಸ್ತಿಯನ್ನು ಸಾಕುನಾಯಿಯ ಹೆಸರಿಗೆ ಬರದಿದ್ದಾನೆ. ಮಾತ್ರವಲ್ಲದೆ ಉಳಿದರ್ಧ ಆಸ್ತಿಯನ್ನು ಹೆಂಡತಿಯ ಹೆಸರಿಗೆ ವಿಲ್ ಬರೆಸಿದ್ದಾನೆ.

ನಾಲ್ಕು ಏಕರೆ ಜಮೀನನನ್ನು ಹೊಂದಿರುವ ಸೂರ್ಯನಾರಾಯಣ್, ತಲಾ 2 ಎಕರೆಯನ್ನು ಸಾಕುನಾಯಿ ಹಾಗೂ ಹೆಂಡತಿಗೆ ಹಂಚಿದ್ದಾನೆ.  ಈ ಕುರಿತು ಪ್ರತಿಕ್ರಿಯೆ ನೀಡಿದ ಸೂರ್ಯನಾರಾಯಣ್,  ” ಹೆಂಡತಿ ಹಾಗೂ ಸಾಕುನಾಯಿ ನನಗೆ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರು ನನಗೆ ಹೆಚ್ಚು ಪ್ರಿಯರು” ಎಂದು  ತಿಳಿಸಿದ್ದಾರೆ.

ನನ್ನ ಮರಣದ ನಂತರ, ನನ್ನ ಹೆಂಡತಿ ಚಂಪಾ ವರ್ಮಾ ಮತ್ತು ನನ್ನ ಸಾಕುನಾಯಿ ನನ್ನ ಆಸ್ತಿ ಮತ್ತು ಭೂಮಿಯನ್ನು ಆನುವಂಶಿಕವಾಗಿ ಪಡೆಯುತ್ತಾರೆ. ಅಲ್ಲದೆ, ನಾಯಿಯ ಮರಣದ ನಂತರ, ಅದನ್ನು ಆಸರೆಯಾದವರು ಆಸ್ತಿಯ ಪಾಲನ್ನು ಪಡೆಯುತ್ತಾರೆ ಎಂದು ಸೂರ್ಯನಾರಾಯಣ್ ಹೇಳಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಶಾಲಾ-ಕಾಲೇಜು ಆರಂಭ: ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಗುರುಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next