ಗುರುಗ್ರಾಮ್: ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಕೇಳಿ ಮನನೊಂದು ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುಗ್ರಾಮ್ ನಡೆದಿದೆ.
ಮಂಜು (30) ಮೃತ ಯುವತಿ.
ಬಿಹಾರ ಮೂಲದ ಮಂಜು ಸೆಕ್ಟರ್ 37 ಪ್ರದೇಶದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ಸಮಯದಿಂದ ದಿನಸಿ ಅಂಗಡಿ ನಿರ್ವಾಹಕ, ಬಾಬುಲಾಲ್ ಎನ್ನುವ ಯುವಕನನ್ನು ಪ್ರೀತಸುತ್ತಿದ್ದರು.
ಭಾನುವಾರ ಸಂಜೆ ಯುವಕ ಬಾಬುಲಾಲ್ ಅಕ್ರಮ್ ಗನ್ ನಿಂದ ತನ್ನನ್ನು ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಕೇಳಿ ನೋವು ಸಹಿಸಿಕೊಳ್ಳದೇ ಮಂಜು ತನ್ನ ಬಾಡಿಗೆ ಮನೆಯಲ್ಲಿ ಅದೇ ದಿನ (ಭಾನುವಾರ ರಾತ್ರಿ) ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದಾರೆ.
Related Articles
ಇದನ್ನೂ ಓದಿ: ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 40 ಮಂದಿ ಸಜೀವ ದಹನ
ಗಂಭೀರ ಗಾಯಗೊಂಡಿದ್ದ ಮಂಜು ಅವರನ್ನು ಸಿವಿಲ್ ಆಸ್ಪತ್ರೆಗೆ ಚಿಂತಾಜನಕ ಸ್ಥಿತಿಯಲ್ಲಿ ದಾಖಲಿಸಿ, ಆ ಬಳಿಕ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಂಗಳವಾರ ಸಂಜೆ ( ಮಾ.28 ರಂದು) ಚಿಕಿತ್ಸೆ ಫಲಿಸದೆ ಮಂಜು ಮೃತಪಟ್ಟಿದ್ದಾರೆ ಎಂದು ಸೆಕ್ಟರ್ 37 ಪೊಲೀಸ್ ಠಾಣೆಯ ಎಸ್‌ಎಚ್‌ಒ ,ಎನ್‌ಸ್ಪೆಕ್ಟರ್ ಸುನೀತಾ ಹೇಳಿದ್ದಾರೆ.
ಬುಧವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ವರದಿ ತಿಳಿಸಿದೆ.