Advertisement

98 ವರ್ಷದ ಈ ತಾತನ ಕೆಲಸ ಎಂಥವರಿಗೂ ಸ್ಪೂರ್ತಿ..!

09:58 PM Mar 10, 2021 | Team Udayavani |

ರಾಯ್ ಬರೇಲಿ : ಜೀವನ ನಡೆಸುವುದು ಎಷ್ಟು ಕಷ್ಟ ಅಂದ್ರೆ ಕೆಲವರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ವಯಸ್ಸಾಗಿರೊ ಅದೆಷ್ಟೋ ಜನ ತಮ್ಮ ಮಕ್ಕಳಿಂದ ದೂರವಾಗಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದಾರೆ. ಆದ್ರೆ ಅಂತಹ ವಯಸ್ಸಾದ ಮಂದಿಗೆ ಈ ತಾತ ಸ್ಪೂರ್ತಿಯಾಗಿದ್ದಾರೆ.

Advertisement

ಹೌದು ಉತ್ತರ ಪ್ರದೇಶದ ರಾಯ್ ಬರೇಲಿ ಪ್ರದೇಶದ ವಿಜಯ ಪಾಲ್ ಎಂಬ 98 ವರ್ಷದ ತಾತ ತನ್ನ ಜೀವನ ನಡೆಸಲು ಚಾನ ಚಾಟ್(ಶೇಂಗಾ ಬೀಜಗಳಿಂದ ಮಾಡಿದ ಪದಾರ್ಥ) ಮಾಡಿ ಮಾರುತ್ತಿದ್ದಾರೆ. ಯಾರೋ ಈ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಕೆಲ ಹೊತ್ತಿನಲ್ಲೆ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ.

ಈ ಇಳಿ ವಯಸ್ಸಿನಲ್ಲೂ ಹೀಗೇಕೆ ಕೆಲಸ ಮಾಡುತ್ತಿದ್ದೀರಿ ಎಂದು ತಾತನಿಗೆ ಕೇಳಿದ್ರೆ, ಇದೇನು ಕಡ್ಡಾಯವಲ್ಲ. ಆದ್ರೆ ಮನೆಯಲ್ಲಿ ಕುಳಿತು ಏನು ಮಾಡೋದು ಅಂತ ಇಲ್ಲಿ ವ್ಯಾಪಾರ ಮಾಡುತ್ತೇನೆ ಎಂದಿದ್ದಾರೆ.

ಆದ್ರೆ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ತಾತ ವಿಜಯ್ ಪಾಲ್ ಮೇಲೆ ಕನಿಕರ ಬಾರದಿರದು. ಇನ್ನು ತಾತನ ವಿಡಿಯೋ ನೋಡಿದ ಉತ್ತರ ಪ್ರದೇಶ ಸರ್ಕಾರ ಗೌರವಿಸಿದೆ. ಅಲ್ಲದೆ ಆ ಪ್ರದೇಶ ಜಿಲ್ಲಾಧಿಕಾರಿ ತಾತನಿಗೆ 11000 ಹಣ ಮತ್ತು ಒಂದು ಊರುಗೋಲನ್ನು ಕೊಡಿಸಿದೆ.

Advertisement

ನೋಡಿ ಇಂತಹ ಇಳಿ ವಯಸ್ಸಿನಲ್ಲೂ ಯಾರಿಗೂ ಭಾರವಾಗದೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಹಂಬಲದಿಂದ ತಾತ ಸಣ್ಣ ವ್ಯಾಪಾರ ಮಾಡುತ್ತಿದ್ದಾರೆ. ಈ ತಾತ ಅದೆಷ್ಟೋ ಜನರಿಗೆ ಮಾದರಿಯಾಗಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next