Advertisement

ಮಣಿಪುರದಲ್ಲಿ ಕಿಡಿಗೇಡಿಗಳ ಜಾಲ ಬಯಲು; ವಿದ್ಯುತ್‌ ಕಂಬ ಉರುಳಿಸಲು ದೇಸಿ ಶಸ್ತ್ರ

12:29 AM Jul 17, 2023 | Team Udayavani |

ಇಂಫಾಲ: ಎರಡು ತಿಂಗಳುಗಳಿಂದ ಈಚೆಗೆ ಈಶಾನ್ಯ ರಾಜ್ಯ ಮಣಿಪುರದಲ್ಲಿ ಹಿಂಸಾಕೃತ್ಯಗಳು ನಡೆಯುತ್ತಿದ್ದು, 150 ಮಂದಿ ಅಸುನೀಗಿದ್ದಾರೆ. ಪರಿಸ್ಥಿತಿಯನ್ನು ದುರುಪ ಯೋಗ ಮಾಡಿಕೊಂಡು ವಿದ್ಯುತ್‌ ಕಂಬ ಸೇರಿದಂತೆ ಹಲವು ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುವ ಗುಂಪಿನ ಸಂಚನ್ನು ಸೇನೆ ಬಯಲಿಗೆ ಎಳೆದಿದೆ.

Advertisement

ದುಷ್ಕರ್ಮಿಗಳು ತಮ್ಮ ಕೃತ್ಯಕ್ಕೆ ಅತ್ಯಾಧು ನಿಕ ಸಲಕರಣೆಗಳನ್ನು ಬಳಸದೆ, ಜಿ.ಐ. ಪೈಪ್‌ಗಳನ್ನು ಬೇಕಾದ ಆಕಾರಕ್ಕೆ ರೂಪಿಸಿ ಉಪ ಯೋಗಿಸಿದ್ದಾರೆ. ಅವುಗಳ ಮೂಲಕ ವಿದ್ಯುತ್‌ ಕಂಬಗಳನ್ನು ಕಿತ್ತು ಹಾಕುತ್ತಿದ್ದಾರೆ. ಸ್ಥಳೀಯವಾಗಿಯೇ ಇವುಗಳನ್ನು ಸಿದ್ಧ ಪಡಿಸ ಲಾಗಿದೆ ಎಂದು ಗೊತ್ತಾಗಿದೆ. ಇದಲ್ಲದೆ ಪೊಲೀಸ್‌ ಠಾಣೆಗಳಿಗೆ ನುಗ್ಗಿ ಅಲ್ಲಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳು, ಗುಡ್ಡಗಾಡು ಪ್ರದೇಶಗಳಲ್ಲಿ ಗುಂಪುಗಳು ಹೊಡೆ ದಾಟಕ್ಕೆ ಬಳಕೆ ಮಾಡುವ ಆಯುಧಗಳು, ಎ.ಕೆ. 47, ಇನ್ಸಾಸ್‌ ರೈಫ‌ಲ್‌ಗ‌ಳಂತೆಯೇ ಇರುವ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಕಾಕ್‌ಚಿಂಗ್‌ ಜಿಲ್ಲೆಯಲ್ಲಿ ನಿಯೋಜಿತರಾಗಿರುವ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸೇನಾಧಿಕಾರಿ, “ಇಲ್ಲಿನ ಕೆಲವರು ಎಂಥ ಆಯುಧಗಳನ್ನು ಬೇಕಾದರೂ ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಜಿ.ಐ. ಪೈಪ್‌ಗ್ಳಿಂದ ಸಿದ್ಧಪಡಿಸಲಾಗಿರುವ ಆಯುಧಗಳ ಮೂಲಕ ವಿದ್ಯುತ್‌ ಕಂಬಗಳನ್ನು ಕಿತ್ತು ಹಾಕಿದ ಅಂಶ ಬೆಳಕಿಗೆ ಬಂದಿದೆ.

ಕೊಂದು ವಿರೂಪಗೊಳಿಸಿದರು
ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಕಿಡಿಗೇಡಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಮಾತ್ರವಲ್ಲದೆ ಅವರ ಮುಖವನ್ನು ವಿರೂಪಗೊಳಿಸಿ ಕ್ರೌರ್ಯ ಮೆರೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಸೇನಾ ಸಿಬಂದಿ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಶನಿವಾರ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ನಡೆದ ಮತ್ತೂಂದು ಘಟನೆಯಲ್ಲಿ ದುಷ್ಕರ್ಮಿಗಳು ಮೂರು ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next