Advertisement

ಆಂಬಿ ವ್ಯಾಲಿ ಹರಾಜು: ಸಹಾರಾಗೆ ಸುಪ್ರೀಂ ಚಾಟಿ

09:53 AM Oct 13, 2017 | Team Udayavani |

ಹೊಸದಿಲ್ಲಿ: ಸಹಾರಾ ಪರಿವಾರದ ಒಡೆತನದಲ್ಲಿರುವ “ಆಂಬಿ ವ್ಯಾಲಿ’ಯ ಹರಾಜಿಗೆ ಅಡ್ಡಿಪಡಿಸಿದ ಆರೋಪ ಹೊತ್ತಿರುವ ಸಹಾರಾ ಸಮೂಹವನ್ನು ಸುಪ್ರೀಂ ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹರಾಜಿಗೆ ಭಂಗ ಪಡಿಸಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, ಸಂಬಂಧಪಟ್ಟವರನ್ನು ನೇರವಾಗಿ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಸಿದೆ. ಪುಣೆಯ ಬಳಿಯಿರುವ ಆಂಬಿ ವ್ಯಾಲಿಯನ್ನು  ಹರಾಜು ಮಾಡುವಂತೆ ಸುಪ್ರೀಂ ಕೋರ್ಟ್‌, ಸೆಬಿಗೆ ಆದೇಶಿಸಿತ್ತು. ಆದರೆ, ಪುಣೆಯ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದ‌ ಸಹಾರಾ ಗ್ರೂಪ್‌, ಹರಾಜು ನಡೆಸಿದರೆ ಪುಣೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಬಗ್ಗೆ ಭ್ರಾಂತಿ ವ್ಯಕ್ತಪಡಿಸಿತ್ತು. ಸಹಾರಾ ಗ್ರೂಪ್‌ನ ನಡೆಯಿಂದ ಕೆರಳಿದ “ಸೆಬಿ’ ಈ ವಿಚಾರವನ್ನು ಸುಪ್ರೀಂ ಗಮನಕ್ಕೆ ತಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next