Advertisement
ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಉಪ್ಪೂರಿನ ಡೈರಿಯನ್ನು ಸುಮಾರು 87.25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಮಾರುಕಟ್ಟೆಯ ಬೇಡಿಕೆ ಪೂರೈಸಲು 1.5 ಲಕ್ಷ ಲೀ. ಸಾಮರ್ಥ್ಯದ ಡೈರಿಯ ಆವಶ್ಯಕತೆ ಇದೆ. ಮುಂದಿನ 5 ವರ್ಷಗಳ ಬೆಳವಣಿಗೆಯನ್ನು ಗಮನಿಸಿ ದಿನಕ್ಕೆ 2.5 ಲಕ್ಷ ಲೀ. ಸಾಮರ್ಥ್ಯ ಹೊಂದಿರುವ ಡೈರಿ ನಿರ್ಮಾಣ ಮಾಡಲಾಗಿದೆ.
ಆರಂಭದಲ್ಲಿ ದಿನವೊಂದಕ್ಕೆ 4,500 ಲೀ. ಹಾಲನ್ನು ಮಾತ್ರ ಸಂಗ್ರಹಿಸುತ್ತಿದ್ದ ಒಕ್ಕೂಟ ಪ್ರಸ್ತುತ ಸಾಲಿನಲ್ಲಿ ದಿನಕ್ಕೆ ಸರಾಸರಿ 4.50 ಲಕ್ಷ ಕೆ.ಜಿ ಹಾಲು ಶೇಖರಿಸುತ್ತಿದೆ. ಹಾಲು ಮಾರಾಟವು 3.5 ಲಕ್ಷ ಲೀ. ದಾಟಿದೆ. ಜೂನ್ 2018ರಲ್ಲಿ ಒಕ್ಕೂಟವು 4.80 ಲಕ್ಷ ಕೆ.ಜಿ ಹಾಲು ಶೇಖರಿಸಿ ಸಾಧನೆ ಮಾಡಿದೆ.
Related Articles
Advertisement
ಸದಸ್ಯರ ಬೇಡಿಕೆ ಅನುಸಾರ ಪ್ರತಿ ತಿಂಗಳಿಗೆ ಸರಾಸರಿ 6,130 ಮೆ. ಟನ್ ಪಶು ಆಹಾರವನ್ನು ವಿತರಿಸಲಾಗುತ್ತದೆ. ಅದಕ್ಕಾಗಿ ಮೇವು ಅಭಿವೃದ್ಧಿ ಹುಲ್ಲುಗಾವಲು ರಚನೆಯಾಗಿದೆ.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸಚಿವರಾದ ಎಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ವೆಂಕಟರಾವ್ ನಾಡ ಗೌಡ, ಡಾ| ಜಯಮಾಲಾ, ಯು.ಟಿ. ಖಾದರ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಅವರು ಉಪ್ಪೂರು ಡೈರಿಯ ವಿವಿಧ ಘಟಕಗಳನ್ನು ಉದ್ಘಾಟಿಸಲಿದ್ದಾರೆ, ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.