Advertisement

ಉಪ್ಪಿನಂಗಡಿ: ಹೆದ್ದಾರಿ ಬದಿಯಲ್ಲೇ ಘನತ್ಯಾಜ್ಯ ರಾಶಿ

10:08 PM May 15, 2019 | mahesh |

ಉಪ್ಪಿನಂಗಡಿ: ಘನತ್ಯಾಜ್ಯ ಘಟಕಕ್ಕೆ ನಿವೇಶನ ಕೊರತೆಯಿಂದ ಹೆದ್ದಾರಿ ಬದಿ ಸುರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಗ್ರಾಮ ಪಂಚಾಯತ್‌ ಸವಿ ಸ್ತಾರವಾಗಿದ್ದು, 20ಕ್ಕೂ ಮಿಕ್ಕ ಸದಸ್ಯರಿದ್ದು, ವರ್ಷವೊಂದಕ್ಕೆ 10 ಕೋಟಿಗೂ ಮಿಕ್ಕ ಮಿತಿ ಮುಟ್ಟುವಂತಾಗಿದೆ. ಕುಡಿಯುವ ನೀರು, ದಾರಿ ದೀಪ, ರಸ್ತೆಗಳ ಅಭಿವೃದ್ಧಿಗೆ ಕಾಳಜಿ ವಹಿಸಿದ್ದರೂ ಘನತ್ಯಾಜ್ಯ ವಿಲೇವಾರಿ ಗೊತ್ತುಗುರಿ ಕಳೆದುಕೊಂಡಂತಾಗಿದೆ.

Advertisement

ಬದಲಿ ಜಾಗವಿಲ್ಲ
ಉಪ್ಪಿನಂಗಡಿ ಅತೀ ದೊಡ್ಡ ಪಂಚಾಯತ್‌ ಎನ್ನುವ ಹೆಗ್ಗಳಿಕೆ ಇದ್ದರೂ ತ್ಯಾಜ್ಯ ಘಟಕಕ್ಕೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈಗಾಗಲೇ ಹಿರ್ತಡ್ಕ ಮಠ ಎನ್ನುವಲ್ಲಿ ಘಟಕಕ್ಕಾಗಿ ಜಾಗವನ್ನು ಮಂಜೂರುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ ಆಸುಪಾಸಿನ ವ್ಯಕ್ತಿಯೋರ್ವರು ತಡೆಯಾಜ್ಞೆ ತಂದಿದ್ದು, ಬದಲಿ ಜಾಗ ಇಲ್ಲದಾಗಿದೆ.

ಈ ಹಿಂದೆ ಉಪ್ಪಿನಂಗಡಿ ಹಾಗೂ ಹಿರೇಬಂಡಾಡಿ ಪ್ರದೇಶದಲ್ಲಿ ಪಂಚಾ ಯತ್‌ಗೆ ಸೇರಿದ ನಿರ್ವೇಶನದಲ್ಲಿ ಪ್ರತ್ಯೇಕ ಡಂಪಿಂಗ್‌ ಯಾರ್ಡ್‌ ರಚಿಸಲಾಗಿತ್ತು. ಇದಕ್ಕೆ ಆಸುಪಾಸಿನ ನಾಗರಿಕರು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿ ರದ್ದುಗೊಳಿಸಿದ್ದು, ಸ್ಥಳೀಯ ಪಂ.ಗೆ ದಿಕ್ಕು ತೋಚದಂತಾಗಿದೆ. ಹೆದ್ದಾರಿ ಬದಿ ಸುರಿಯುವ ಅನಿವಾರ್ಯತೆ ಮೂಡಿದೆ. ಗ್ರಾಮದಲ್ಲಿ ಸರಕಾರಿ ಗೋಮಾಳ ನಿವೇಶನವಿದ್ದರೂ ಸಾರ್ವಜನಿಕ ಸೇವೆಯ ಘನತ್ಯಾಜ್ಯ ನಿರ್ವಹಣೆಗೆ ಅದು ಸಿಗದಿರುವುದು ವಿಪರ್ಯಾಸ.

ಪಂಚಾಯತ್‌ ಹಲವು ಬಾರಿ ವಿವಿಧ ಆಯಾಮಗಳಲ್ಲಿ ಪ್ರತ್ಯೇಕ ಸ್ಥಳಕ್ಕಾಗಿ ವ್ಯವಸ್ಥೆಗೆ ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಪ್ಲಾಸ್ಟಿಕ್‌ ಸಹಿತ ಘನ ತ್ಯಾಜ್ಯ ವಸ್ತುಗಳ ಪುಡಿಗೈಯುವ ಮೂಲಕ ಬದಲಿ ವ್ಯವಸ್ಥೆ ಯಂತ್ರ ಖರೀದಿಸಲು ಕನಿಷ್ಠ 60 ಲಕ್ಷ ರೂ. ವೆಚ್ಚವಿದ್ದು, ಅಷ್ಟೊಂದು ಹಣ ಜೋಡಣೆಗೆ ಬಜೆಟ್‌ನಲ್ಲಿ ಅವಕಾಶವಿಲ್ಲ. ಅದಕ್ಕಾಗಿ ವರ್ತಕರ, ಜನಪ್ರತಿನಿಧಿಗಳ ಸಹಕಾರವಿದ್ದರೆ ಹಾದಿ ಸುಗಮವಾಗಲಿದೆ ಎಂದು ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ಹೇಳಿದ್ದಾರೆ.

ಕಾಳಜಿ ವಹಿಸಿ
ಘನತ್ಯಾಜ್ಯ ಘಟಕ ರಚಿಸಲು ಗ್ರಾಮಸ್ಥರ, ಸಂಘಸಂಸ್ಥೆ, ಜನಪ್ರತಿನಿಧಿ, ಅಧಿಕಾರಿಗಳ ಸಹಕಾರ ಕೋರಿ ವಿಶೇಷ ಸಭೆ ಕರೆದು ಪ್ರತ್ಯೇಕ ಜಾಗ ಗುರುತಿಸುವ ಮೂಲಕ ಗ್ರಾಮಸ್ಥರ ಆರೋಗ್ಯದ ಕಡೆ ಕಾಳಜಿ ವಹಿಸಬೇಕು ಎಂದು ಗೋಪಾಲ ಹೆಗ್ಡೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next