ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸು ತ್ತಿದ್ದ ನಾಡಕಚೇರಿಯನ್ನು ಉಪ್ಪಿನಂಗಡಿಯ ಪಂಚಾಯತ್ ಕಟ್ಟಡಕ್ಕೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಿಸಿ , ಹೊಸದಾಗಿ ನಾಡಕಚೇರಿಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು.
Advertisement
ಕಂದಾಯ ಇಲಾಖೆಯ 18.84 ಲಕ್ಷ ರೂ. ಅನುದಾನದಲ್ಲಿ ನೂತನ ನಾಡ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ಯೋಜ ನೆಯ ರೂಪುರೇಖೆಯಂತೆ ಇದರಲ್ಲಿ ಕಟ್ಟ ಡದ ಒಳಗಡೆ ಶೌಚಾಲಯ ಇತ್ತು. ಆದರೆ ಇಲ್ಲಿನ ಅಧಿಕಾರಿಗಳು ಒಳಗಡೆ ಶೌಚಾಲಯ ಬೇಡ. ಹೊರಗಡೆ ಇರಲಿ ಎಂದದ್ದಕ್ಕೆ ಬಾಕಿ ಉಳಿಯಿತು. ಇನ್ನು ಹೊರಗಡೆ ವರಾಂಡಕ್ಕೆ ಇಂಟರ್‌ಲಾಕ್, ಸಿಟೌಟ್ ವ್ಯವಸ್ಥೆ ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಅಂದಿನ ಶಾಸಕರು ಸ್ಥಳೀಯಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂ.ಗಳನ್ನು ಕೊಡುತ್ತೇನೆ ಎಂದು ತಿಳಿಸಿದ್ದರು. ಆಗ ಶೌಚಾಲಯ ನಿರ್ಮಾಣದ ಕೆಲಸ ಕೂಡ ಒಟ್ಟಿಗೆ ಮಾಡೋಣ ಅಂತ ಅದನ್ನು ಹಾಗೆ ಬಾಕಿ ಉಳಿಸಿ, ಕಟ್ಟಡವನ್ನು ಮಾತ್ರ ನಿರ್ಮಿಸಿದ್ದೇವೆ. ಆದರೆ ಶಾಸಕರು ಹೇಳಿದ ಹೆಚ್ಚುವರಿ ಅನುದಾನ ಬರಲಿಲ್ಲ. ಆದ್ದರಿಂದ ಈ ಮೊದಲಿನ ರೂಪುರೇಖೆಯಲ್ಲಿದ್ದ ಶೌಚಾ ಲಯವನ್ನು ಒಳಗಡೆ ಅಥವಾ ಹೊರಗಡೆ ಎಲ್ಲಿ ಬೇಕೋ ಅಲ್ಲಿ 10 ದಿನಗಳೊಳಗೆ ನಿರ್ಮಿಸಲಾಗುವುದು ಎಂದು ನಿರ್ಮಿತಿ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ಯೋಜನ ವ್ಯವಸ್ಥಾಪಕ ಹರೀಶ್ ಹೇಳಿದ್ದಾರೆ.
ಉಪ್ಪಿನಂಗಡಿಯ ಹಾಗೆ ವಿಟ್ಲದ ನಾಡಕಚೇರಿ ಕಟ್ಟಡದಲ್ಲೂ ಸಮಸ್ಯೆ ಯಾಗಿದೆ. ಈ ಕಟ್ಟಡಗಳು ಶೀಘ್ರವಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕು. ಅದಕ್ಕಾಗಿ ಇಲ್ಲಿಗೆ ಬೇಕಾಗಿರುವ ತಲಾ ಐದು ಲಕ್ಷ ರೂ. ನಂತೆ 10 ಲಕ್ಷ ರೂ. ಅನುದಾನವನ್ನು ತಾನು ತನ್ನ ಅನುದಾನದಿಂದ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು ಕ್ಷೇತ್ರ