Advertisement

Uppinangady ಕೇರಳ ಲಾಟರಿ 50 ಲಕ್ಷ ರೂ. ಬಹುಮಾನ

12:55 AM Sep 28, 2023 | Team Udayavani |

ಉಪ್ಪಿನಂಗಡಿ: ಬಡತನ ವಿದ್ದರೂ ನಿಷ್ಠೆ, ಪ್ರಾಮಾಣಿಕತೆ ಯಿಂದ ದುಡಿದು ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿರುವ ಇಳಂತಿಲ ಗ್ರಾಮದ ಏನ್ಮಾಡಿಯ ಚಂದ್ರಯ್ಯ ಕುಂಬಾರ ಅವರನ್ನು ಕೊನೆಗೂ ಅದೃಷ್ಟ ಲಕ್ಷ್ಮೀ ಕೈ ಹಿಡಿದಿದ್ದು, ಕೇರಳ ರಾಜ್ಯ ಲಾಟರಿ ಯಲ್ಲಿ 50 ಲಕ್ಷ ರೂ. ಗೆದ್ದಿದ್ದಾರೆ.

Advertisement

ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಅವರು ಕಾನತ್ತೂರಿನ ಶ್ರೀ ನಾಲ್ವರ್‌ ದೈವಸ್ಥಾನ ಕ್ಷೇತ್ರಕ್ಕೆ ಹೋದಾಗ 500 ರೂಪಾಯಿಯ ಓಣಂ ಬಂಪರ್‌ ಲಾಟರಿ ಟಿಕೇಟ್‌ ಖರೀದಿಸಿದ್ದರು. ಅದರ ಬಂಪರ್‌ ಬಹುಮಾನ 25 ಕೋಟಿ ಆಗಿದ್ದು, ಇವರು ಮೂರನೇ ಬಹುಮಾನ ಗೆದ್ದುಕೊಂಡಿದ್ದಾರೆ.

ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡ ಅವರು, ನಾನು ಜನತಾ ಕಾಲನಿಯ 5 ಸೆಂಟ್ಸ್‌ನ ನಿವಾಸಿ.

ಪತ್ನಿ, ನಾಲ್ವರು ಹೆಣ್ಣುಮಕ್ಕಳು. ಇಬ್ಬರನ್ನು ಮದುವೆ ಮಾಡಿಸಿ ಕೊಟ್ಟಿದ್ದೇನೆ. ದೊಡ್ಡವಳು ಪಿಯುಸಿ ತನಕ ಓದಿದ್ದರೆ, ಎರಡನೆಯವಳು ಎಂಬಿಎ ಓದುತ್ತಿದ್ದಾಳೆ. ಇನ್ನಿಬ್ಬರಲ್ಲಿ ಓರ್ವಳು ಮೂರನೇ ವರ್ಷದ ಪದವಿ
ವ್ಯಾಸಂಗ ಮಾಡುತ್ತಿದ್ದು, ಇನ್ನೊಬ್ಟಾಕೆ ಪ್ಯಾರಾಮೆಡಿಕಲ್‌ ಓದುತ್ತಿದ್ದಾಳೆ. ನಾನೊಬ್ಬನೇ ದುಡಿದು ಸಂಸಾರ ಸಾಗಬೇಕು. ಬಡತನವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಅವಗ ಣಿಸಿಲ್ಲ. ಮಕ್ಕಳ ಮದುವೆ, ಶಿಕ್ಷಣ ಎಂದು 10 ಲಕ್ಷದಷ್ಟು ಸಾಲ ಮಾಡಿ ದ್ದೇನೆ. ಅದನ್ನು ತೀರಿಸಲು ಮೊದಲ ಆದ್ಯತೆ ನೀಡುತ್ತೇನೆ. ನನ್ನ ಕಷ್ಟವನ್ನು ದೇವರು ಅರಿತಿರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next