Advertisement

Uppinangady: ಮರದ ದಿಮ್ಮಿ ಅಕ್ರಮ ಸಾಗಾಟ; ಲಾರಿ ವಶ-ಆರೋಪಿ ಸೆರೆ

05:21 PM Sep 20, 2023 | Team Udayavani |

ಉಪ್ಪಿನಂಗಡಿ: ನೆಲ್ಯಾಡಿಯ ಹೊಸಮಜಲು ಎನ್ನುವಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮರದ ದಿಮ್ಮಿಗಳನ್ನು ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಆರೋಪಿಯನ್ನು ಲಾರಿ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಆರೋಪಿ ಸಕಲೇಶಪುರದ ಆನಂಗಿ ಮನೆ ನಿವಾಸಿ ರಜಾಕ್‌ ಬಿನ್‌ ಅಬ್ಟಾಸ್‌ನನ್ನು ದಸ್ತಗಿರಿ ಮಾಡಿ ಆತ ಲಾರಿಯಲ್ಲಿ ಸಾಗಿಸುತ್ತಿದ್ದ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂದೀಪ್‌ ಸಿ.ಕೆ., ರಾವುತ್ತಪ್ಪ ಬಿರಾದಾರ್‌, ರಾಜೇಶ್‌ ಮತ್ತು ದಿನೇಶ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next