Advertisement
ಉಪ್ಪಿನಂಗಡಿಯ ಕೋಟೆ ನಿವಾಸಿ ಗಂಗಾಧರ್ ಟೈಲರ್ (70) ಎಂಬವರು ಮುಂಜಾನೆ 7.30ರ ಸುಮಾರಿಗೆ ಹೊಟೇಲೊಂದಕ್ಕೆ ಹೋಗುತ್ತಿದ್ದಾಗ ದಾರಿ ಮಧ್ಯೆ ಭೇಟಿಯಾದ ಯುವಕನೋರ್ವ ಅವರನ್ನು ಮಾತಿಗೆಳೆದು ಅವರಿಗೆ ಅರಿವಿಲ್ಲದೆಯೇ ಅವರಾಗಿಯೇ ಅವರ ಕತ್ತಿನಲ್ಲಿದ್ದ ಚಿನ್ನಾಭರಣವನ್ನು ಆತನ ಕೈಗಿತ್ತರು. ಬಳಿಕ ಬ್ಯಾಂಕಿಗೆ ಹೋಗಿ ಠಸೆ ಪೇಪರ್ ತನ್ನಿ ಎಂಬ ಆತನ ಸೂಚನೆಯನ್ನು ಪಾಲಿಸಿ ಬ್ಯಾಂಕಿನತ್ತ ಸಾಗಿದ ಅವರಿಗೆ ತುಸು ದೂರ ಹೋದಾಗ, ತಾನ್ಯಾಕೆ ಆತನಿಗೆ ಚಿನ್ನಾಭರಣವನ್ನು ನೀಡಿದೆ ? ತಾನ್ಯಾಕೆ ಈ ಹೊತ್ತಲ್ಲಿ ಬ್ಯಾಂಕಿನತ್ತ ಹೋಗುತ್ತಿದ್ದೇನೆ ಎಂಬ ಅರಿವು ಉಂಟಾಗಿ, ಚಿನ್ನಾಭರಣ ಹಸ್ತಾಂತರಿಸಿದ ಸ್ಥಳಕ್ಕೆ ಬಂದಾಗ ಯುವಕ ನಾಪತ್ತೆಯಾಗಿದ್ದ. ತಾವು ವಂಚನೆಗೆ ಒಳಗಾದ ಬಗ್ಗೆ ಅರಿವಾಗುತ್ತಲೇ ಆತನಿಗಾಗಿ ಹುಡುಕಾಟ ನಡೆಸಿದರಾದರೂ ವಿಫಲರಾಗಿ ಪೊಲೀಸರಿಗೆ ದೂರು ನೀಡಿದರು.ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಸಮೀಪ ಇರುವ ಕೋಳಿ ಮಾಂಸ ಮಾರಾಟ ಮಳಿಗೆಗಳಿಗೆ ಕಳ್ಳನೋರ್ವ ನುಗ್ಗಿ ನಗದು ಹಣವನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಶೈಲೇಶ್ ಗಾಣಿಗ ಹಾಗೂ ನಿತೀನ್ ಸುವರ್ಣ ಅವರ ಕೋಳಿ ಮಾಂಸ ಮಾರಾಟ ಅಂಗಡಿಗೆ ನುಗ್ಗಿದ ಕಳ್ಳನೋರ್ವ ಶೈಲೇಶ್ ಅಂಗಡಿಯೊಳಗಿದ್ದ ಒಂದು ಅಂಗಡಿಯಿಂದ 10 ಸಾವಿರ ರೂ. ಎಗರಿಸಿರುವುದು ಸಿಸಿ ಕೆಮರಾ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.