Advertisement
ಕೇರಳ ತೃಶೂರ್ ನ ಇಲ್ಯಾಸ್ ( 34) ಬಿನ್ ಅಬ್ದುಲ್ ರಜಾಕ್ ಹಾಗೂ ನೆಲ್ಸನ್ ಸಿ ವಿ (30) ಬಿನ್ ವಿಲ್ಸನ್ ಕಿಲ್ಲನೂರು ಬಂಧಿತರು.
Related Articles
ದರೋಡೆಕೋರರು ಪೊಲೀಸ್ ಕಣ್ಣಿನ ಬೀಳದಂತೆ ಕೃತ್ಯ ನಡೆಸುವಾಗ ಮೊಬೈಲ್ ಬಳಸದಿರುವ ರಕ್ಷಣಾ ತಂತ್ರವನ್ನು ಅನುಸರಿಸುತ್ತಿದ್ದ ಹಿನ್ನೆಲೆಯಲ್ಲಿ ದರೋಡೆಕೋರರ ಪತ್ತೆ ಕಾರ್ಯ ಜಟಿಲವಾಗಿತ್ತು.
ಆದಾಗ್ಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ , ಡಿವೈ ಎಸ್ಪಿ ಅವರ ಸೂಕ್ತ ಮಾರ್ಗದರ್ಶನದಿಂದ ತನಿಖಾ ವ್ಯೂಹವನ್ನು ಹೆಣೆಯಲಾಯಿತು.
Advertisement
ಉಪ್ಪಿನಂಗಡಿ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ, ಎಸ್ ಐ ನಂದ ಕುಮಾರ್ ಮತ್ತವರ ಅಪರಾಧ ಪತ್ತೆ ದಳದ ಸಿಬಂದಿ ಅವಿರತ ಶ್ರಮಿಸಿ ಪತ್ತೆ ಮಾಡಿದರು. ದರೋಡೆಕೋರರು ಕೇರಳ ಮೂಲದವರೆನ್ನುವುದನ್ನು ಖಚಿತಪಡಿಸಿ ಕೊಂಡರು.
ದರೋಡೆಕೋರರ ಮೇಲೆ ನಿಗಾವಿರಿಸಿದ್ದ ಪೊಲೀಸ್ ವಿಶೇಷ ತಂಡಕ್ಕೆ ಸೋಮವಾರ ರಾತ್ರಿ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಯಲ್ಲಿ ಮತ್ತೆ ಯಾವುದೋ ಅಪರಾಧ ಕೃತ್ಯವೆಸಗಲು ಆಗಮಿಸಿದ್ದ ಇಲ್ಯಾಸ್ ಹಾಗೂ ನೆಲ್ಸನ್ ಸಿ ವಿ ಸೆರೆ ಸಿಕ್ಕಿದರು. ಪೊಲೀಸರು ವಿಚಾರಣೆ ವೇಶೆ ಇಬ್ಬರೂ ತಮ್ಮ ಕೃತ್ಯವನ್ನು ಒಪ್ಪಿಕೊಂಡರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ದರೋಡೆ ನಡೆಸಿ ಕಬಳಿಸಿದ್ದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯನ್ನು ಕೇಳಿ ಪಡೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಉಪ್ಪಿನಂಗಡಿ ಎಸ್ ಐ ನಂದ ಕುಮಾರ್ ಅವರ ನೇತೃತ್ವದ ಅಪರಾಧ ಪತ್ತೆ ತಂಡ ಯೋಜಿತ ಹಾಗೂ ಯಶಸ್ವೀ ಕಾರ್ಯಾಚರಣೆ ನಡೆಸಿ ಜಾಣ್ಮೆಯ ಅಪರಾಧಿಗಳನ್ನು ಬಂಧಿಸುತ್ತಿರುವುದು ನಾಗರಿಕ ವಲಯದಲ್ಲಿ ಶ್ಲಾಘನೆಗೆ ತುತ್ತಾಗಿದೆ.