Advertisement

ಉಪ್ಪಿನಂಗಡಿ: ಮುಗೇರಡ್ಕ ಬ್ಯಾರೇಜ್‌ ಸೇತುವೆ ಶೀಘ್ರ ಪೂರ್ಣ

03:36 PM Jul 03, 2024 | Team Udayavani |

ಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಮತ್ತು ರಾಷ್ಟ್ರೀಯ ಹೆದ್ದಾರಿ 275ರ ಬೆದ್ರೋಡಿಯನ್ನು ಸಂಪರ್ಕಿಸುವ ಮತ್ತು 16 ಗ್ರಾಮಗಳ ಕೃಷಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ, ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ 240 ಕೋಟಿ ರೂ. ವೆಚ್ಚದ ಅಣೆಕಟ್ಟು ಸಹಿತ ಸೇತುವೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದು ಜಿಲ್ಲೆ  ಯಲ್ಲೇ ಅತಿ ದೊಡ್ಡ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ ಹೊಂದಿದೆ.

Advertisement

ಮುಗೇರಡ್ಕದಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗುತ್ತಿರುವ ಈ ಅಣೆಕಟ್ಟು ಸಹಿತ ಸೇತುವೆ, ಮುಗೇರಡ್ಕ- ಬೆದ್ರೋಡಿ ರಾಷ್ಟ್ರೀಯ ಹೆದ್ದಾರಿ-75 ಸಂಪರ್ಕಿಸುವ ಉದ್ದೇಶವನ್ನು ಹೊಂದಿದೆ. ಅಣೆಕಟ್ಟಿನ ಮೂಲಕ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳ 1100 ಹೆಕ್ಟೇರ್‌ಜಮೀನುಗಳಿಗೆ ಕೃಷಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಗುರುವಾಯನಕೆರೆವರೆಗೆ ನೀರು ಏತ ನೀರಾವರಿಯಿಂದ ತಾಲೂಕಿನ ಮೊಗ್ರು, ಇಳಂತಿಲ, ಕಣಿಯೂರು, ಉರುವಾಲು, ಓಡಿಲ್ನಾಳ, ಕಳಿಯ, ಕುವೆಟ್ಟು, ಮೇಲಂತಬೆಟ್ಟು, ಲಾಲ, ಕೊಯ್ಯೂರು, ಸೋಣಂದೂರು, ಪಡಂಗಡಿ ಗ್ರಾಮಗಳಿಗೆ ಅನುಕೂಲವಾಗಲಿದೆ.

ನದಿ ದಂಡೆಯನ್ನು ಸುಭದ್ರಗೊಳಿಸುವ ಕಾಮಗಾರಿಯೂ ಈ ಯೋಜನೆಯಲ್ಲಿ ಒಳಗೊಂಡಿದೆ. ಇಲ್ಲಿನ ನೀರನ್ನು ಗುರುವಾಯನಕೆರೆಗೆ ತುಂಬಿಸಿ ಅದನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸುವ ಚಿಂತ ನೆಯೂ ಇದೆ.  ಮಹಾ ಪ್ರವಾಹಕ್ಕೆ ಕೊಚ್ಚಿ ಹೋದ ತೂಗು ಸೇತುವೆ ಮುಗೇರಡ್ಕದ ಜನರು ಹಿಂದೆ ನೇತ್ರಾವತಿ ನದಿಯನ್ನು ದಾಟಲು ದೋಣಿಯನ್ನು ಬಳಸುತ್ತಿದ್ದರು. ಬಳಿಕ ಮುಳುಗು ಸೇತುವೆಯೊಂದು ರಚನೆಯಾಗಿ ಬೇಸಿಗೆ ಕಾಲದಲ್ಲಿ ಇದು ಅನುಕೂಲವಾಗುತ್ತಿತ್ತು. ಆದರೆ, ಮಳೆಗಾಲದಲ್ಲಿ ಮುಳುಗುವು ದರಿಂದ ಉಪ್ಪಿನಂಗಡಿ, ಪುತ್ತೂರು ಮೊದಲಾದ ಕಡೆ ಹೋಗುವವರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿತ್ತು. ಅವರು ಮಳೆಗಾಲದಲ್ಲಿ ಸುತ್ತು ಬಳಸಿ ಪೇಟೆಗೆ ಹೋಗಬೇಕಾಗಿತ್ತು. ಕೊನೆಗೆ ಊರವರ ಸಹಕಾರ, ಸಂಘ- ಸಂಸ್ಥೆಗಳ ಬೆಂಬದೊಂದಿಗೆ ತೂಗು ಸೇತುವೆಯೊಂದು ನಿರ್ಮಾಣವಾಗಿ ಮಳೆಗಾಲದಲ್ಲೂ ನದಿ ದಾಟಲು
ಅನುಕೂಲವಾಯಿತು.

ಆದರೆ, 2019ರ ಆಗಸ್ 7 ಮತ್ತು 8ರಂದು ಭಾರೀ ಮಳೆ ಸುರಿದು ಚಾರ್ಮಾಡಿ ಪರಿಸರದಲ್ಲಿ ಅಪಾರ ನಷ್ಟವಾಗಿತ್ತು. ಅಲ್ಲಿನ ಮೃತ್ಯುಂಜಯ ನದಿ ಯಲ್ಲಿ ಹುಟ್ಟಿದ ಭಾರೀ ಪ್ರವಾಹ ನೇತ್ರಾವತಿ ಯನ್ನು ಸೇರಿಕೊಂಡು ಅನಾಹುತಗಳನ್ನು ಸೃಷ್ಟಿಸಿತು. ಈ ಪ್ರವಾಹ ದಲ್ಲಿ ಮುಗೇರಡ್ಕ ಮತ್ತು ಬಜತ್ತೂರು ಗ್ರಾಮದ ಬೆದ್ರೋಡಿ ನಡುವಿನ ತೂಗು ಸೇತುವೆ ಕೂಡಾ ತುಂಡಾಗಿ ಕೊಚ್ಚಿ ಕೊಂಡು ಹೋಯಿತು. ಅದಾದ ಬಳಿಕ ಶಾಶ್ವತ ಸೇತುವೆಯ ಬೇಡಿಕೆ ತೀವ್ರಗೊಂಡಿತು.

ಇಲ್ಲಿಗೆ ಪರ್ಯಾಯ ತೂಗು ಸೇತುವೆ
ರಚಿಸುವ ಬದಲು ಸಾರ್ವಕಾಲಿಕ ಸೇತುವೆಯ ನಿರ್ಮಾಣಕ್ಕೆ ಶಾಸಕ ಹರೀಶ್‌ ಪೂಂಜ ಅವರು ಯೋಚಿಸಿ, ಅದನ್ನು ಕಾರ್ಯ ರೂಪಕ್ಕೆ ಪಣತೊಟ್ಟರು. ಅದರ ಫ‌ಲವಾಗಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಹಂತದಲ್ಲಿದೆ.

Advertisement

ಸೇತುವೆ ಸ್ವರೂಪ ಏನು? ಕಾಮಗಾರಿ ಎಷ್ಟಾಗಿದೆ?
*ಸೇತುವೆ ಸಹಿತ ಕಿಂಡಿಅಣೆಕಟ್ಟಿನ ಕಾಮಗಾರಿ ಪ್ರಗತಿಯಲ್ಲಿದ್ದು, 4 ಪಿಲ್ಲರ್‌ನ ಕಾಮಗಾರಿ ಮುಗಿದಿದೆ

* ಸೇತುವೆ 150 ಮೀಟರ್‌ಉದ್ದ, 17 ಮೀಟರ್‌ ಎತ್ತರ ಇರಲಿದ್ದು, ರಸ್ತೆಯ ಅಗಲ 10 ಮೀಟರ್‌.

*ಸೇತುವೆಗೆ ಬೀಮ್‌ ಪ್ರಿಕಾಸ್ಟಿಂಗ್‌ ಕಾಮಗಾರಿ ನಡೆಯುತ್ತಿದೆ. 30 ಮೀಟರ್‌ನ 15 ಪ್ರಿಕಾಸ್ಟಿಂಗ್‌ ಮಾಡುವ ಕೆಲಸ ನಡೆಯುತ್ತಿದೆ.

*ಸುಮಾರು 13.5 ಮೀಟರ್‌ಎತ್ತರದ ಈ ಕಿಂಡಿ ಅಣೆಕಟ್ಟಿನಲ್ಲಿ ಒಟ್ಟು 15 ಗೇಟ್‌ಗಳಿವೆ.

*ಗೇಟುಗಳು ಸ್ವಯಂಚಾಲಿತವಾಗಿದ್ದು,  ನೀರು ಹೆಚ್ಚಾದಾಗ ತಾವೇ ತೆರೆದುಕೊಳ್ಳುತ್ತವೆ.

ಪಂಪ್‌ ಹೌಸ್‌ನಿರ್ಮಾಣ ಪೂರ್ಣ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು  ಪಂಪ್‌ ಮೂಲಕ ಮೇಲೆತ್ತುವುದಕ್ಕಾಗಿ
ಪಂಪ್‌ ಹೌಸ್‌ ಕಾಮಗಾರಿ ಪೂರ್ತಿಗೊಂಡಿದೆ. ಆಗಲೇ ಪಂಪ್‌ಗಳನ್ನು ಅಳವಡಿಸಲಾಗಿದೆ. ನದಿಯಲ್ಲಿ ಸಂಗ್ರಹವಾದ ನೀರನ್ನು
ಪಂಪ್‌ ಮೂಲಕ ಮೇಲೆತ್ತಿ ಪೈಪ್‌ ಮೂಲಕ ಯೋಜನಾ ಪ್ರದೇಶದ  ಗ್ರಾಮಗಳ ಕೃಷಿಕರಿಗೆ ನೀರಾವರಿಗಾಗಿ ಒದಗಿಸಲಾಗುವುದು. ಪಂಪ್‌ ಹೌಸ್‌ ಬಳಿಯಲ್ಲಿ ವಿದ್ಯುತ್‌ ಸಬ್‌ ಸ್ಟೇಷನ್‌ ಕೆಲಸಗಳು ಪೂರ್ತಿಗೊಂಡಿದೆ. ಸಬ್‌ ಸ್ಟೇಷನ್‌ಗೆ ಉಪ್ಪಿನಂಗಡಿ ಕಡೆಯಿಂದ
ವಿದ್ಯುತ್‌ ಲೈನ್‌ ಎಳೆಯುವ ಕಾಮಗಾರಿ ಬಾಕಿ ಇದೆ.

ಪೈಪ್‌ಲೈನ್‌ ಕಾಮಗಾರಿ ಪೂರ್ಣವಾಗಿಲ್ಲ: 
ಕಿಂಡಿ ಅಣೆಕಟ್ಟಿನ ನೀರನ್ನು ಗುರುವಾಯನ ಕೆರೆ ವರೆಗಿನ ಯೋಜನಾ ಪ್ರದೇಶದ ಗ್ರಾಮಗಳಿಗೆ ತಲುಪಿಸುವ ಪೈಪ್‌ಲೈನ್‌ ಕಾಮ ಗಾರಿ ನ್ಯಾಯತ ತೀರ್ಪು ಬರುವವರೆಗೆ ಮಾತ್ರ ನಡೆದಿದೆ. ನ್ಯಾಯತರ್ಪುನಲ್ಲಿ ಪೈಪ್‌ಲೈನ್‌ ಅರಣ್ಯ ಇಲಾಖೆ ಜಾಗದ ಮೂಲಕ
ಸಾಗಬೇಕಾಗಿದೆ. ಅರಣ್ಯ ಇಲಾಖೆಯ ಅನುಮತಿ ದೊರೆತ ಬಳಿಕ ಕಾಮಗಾರಿ ಮುಂದು ವ ರಿ ಯ ಲಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

*ಎಂ. ಎಸ್‌. ಭಟ್‌, ಉಪ್ಪಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next