Advertisement

ಉಪ್ಪಿನಂಗಡಿ: ರಥೋತ್ಸವ

12:45 PM Feb 26, 2017 | Team Udayavani |

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದಲ್ಲಿ 2ನೇ ಮಹಾಶಿವರಾತ್ರಿ ಮಖೆಕೂಟ ಶುಕ್ರವಾರ ಆರಂಭವಾಗಿದ್ದು, ಶನಿವಾರ ಪ್ರಾತಃಕಾಲ ತೀರ್ಥಸ್ನಾನ ನಡೆದು, ಬೆಳಗ್ಗೆ ಬಲಿ ಹೊರಟು ಉತ್ಸವ, ಶ್ರೀ ದೇವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಶುಕ್ರವಾರ ಬೆಳಗ್ಗೆ 8.30ರಿಂದ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವಲಿಂಗಕ್ಕೆ ಭಕ್ತರು ಅಭಿಷೇಕ ಮಾಡಿದರು. ರಾತ್ರಿ ದೇವಾಲಯದಲ್ಲಿ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆಯಾಯಿತು. ಶನಿವಾರ ಪ್ರಾತಃಕಾಲ ರಥೋತ್ಸವ, ಉತ್ಸವ, ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ಸಮರ್ಪಿಸಲಾಯಿತು. ಬಳಿಕ ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ನೀಡಿ, ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ಜೇಸಿಐ ಉಪ್ಪಿನಂಗಡಿ ಘಟಕ ಶುಕ್ರವಾರ ಭಕ್ತರಿಗೆ ಪಾನಕ ವಿತರಿಸಿದರೆ, ಜೇಸಿಐ ಘಟಕದ ವತಿಯಿಂದ ಶನಿವಾರ ಮಜ್ಜಿಗೆ ವಿತರಿಸಲಾಯಿತು.

Advertisement

ಸಚಿವ ಬಿ. ರಮಾನಾಥ ರೈ, ಕಾ.ನಿ. ಅಧಿಕಾರಿ ಹರೀಶ್ಚಂದ್ರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಲಿಮಾರ್‌ ರಘುನಾಥ ರೈ, ಸೋಮನಾಥ, ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ಸವಿತಾ ಕೆ., ಕೆ. ರಾಧಾಕೃಷ್ಣ ನಾೖಕ್‌, ಅನಿತಾ ಕೆ., ಡಾ| ಕೆ.ಬಿ. ರಾಜಾರಾಮ್‌, ಜಿ. ಕೃಷ್ಣರಾವ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next