Advertisement

Uppinangady: ಸಂಪೂರ್ಣ ಬತ್ತಿದ ಬಿಸಿ ನೀರ ಚಿಲುಮೆ

11:08 PM Apr 13, 2023 | Team Udayavani |

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆಯು ಈ ಬಾರಿಯ ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋಗಿದ್ದು, ನೀರಿನ ಅಂಶವೇ ಇಲ್ಲದಂತೆ ಒಣಗಿ ಹೋಗಿದೆ.

Advertisement

ಸರಿ ಸುಮಾರು 36.6 ಡಿಗ್ರಿ ಉಷ್ಣಾಂಶವನ್ನು ಹೊಂದಿದ್ದ ಇಲ್ಲಿನ ಬಿಸಿ ನೀರ ಚಿಲುಮೆಯು ಚರ್ಮರೋಗ ನಿವಾರಕ ಗುಣವನ್ನು ಹೊಂದಿದ್ದು ಇಲ್ಲಿ ಸ್ನಾನ ಮಾಡುವುದರಿಂದ ಬಹಳಷ್ಟು ಬಗೆಯ ಚರ್ಮ ವ್ಯಾಧಿಗಳು ಗುಣವಾಗುತ್ತಿದ್ದವು. ಬಹಳಷ್ಟು ಮಂದಿ ಇಲ್ಲಿನ ನೀರನ್ನು ಕ್ಯಾನ್‌ಗಳಲ್ಲಿ ತುಂಬಿಸಿ ಕೊಡೊಯ್ಯುತ್ತಿದ್ದರು.

ಸ್ಥಳೀಯ ನಿವಾಸಿ ಮಹಮ್ಮದ್‌ ಹೇಳುವಂತೆ ಈ ಪರಿಯಲ್ಲಿ ಬತ್ತಿರುವುದು ಇದೇ ಮೊದಲು. 4 ವರ್ಷದ ಹಿಂದೆ ಬತ್ತಿತ್ತಾದರೂ ಕೆರೆಯಲ್ಲಿ ನೀರಿನ ಅಂಶ ಗೋಚರಿಸುತ್ತಿತ್ತು. ಆದರೆ ಈ ಬಾರಿ ಸಂಪೂರ್ಣ ಒಣಗಿ ಹೋದಂತಾಗಿದ್ದು, ನೀರೇ ಇಲ್ಲದ ಸ್ಥಳವೇನೋ ಎಂಬಂತೆ ತೋರುತ್ತಿದೆ. ಸತತ ಬಿಸಿಲ ಝಳ ದಿಂದ ಪರಿಸರದೆಲ್ಲೆಡೆ ಜಲ ಮೂಲಗಳು ಬತ್ತುತ್ತಿರುವುದರ ಮಧ್ಯೆ ಪ್ರಾಕೃತಿಕ
ಸೋಜಿಗವನ್ನು ಮೂಡಿಸಿರುವ ಇಂತಹ ಬಿಸಿ ನೀರ ಚಿಲುಮೆಗಳು ಬತ್ತಲಾರಂಭಿ ಸಿದ್ದು, ಈ ಬಾರಿಯ ಬೇಸಗೆ ಹೇಗೋ ಎಂಬ ಭೀತಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next