Advertisement
ಕಟ್ಟಡ ಸಾಮರ್ಥ್ಯ ಹೆಚ್ಚಳ ಸಹಿತ ವಿವಿಧ ಸೌಲಭ್ಯಗಳನ್ನು ಒದಗಿಸ ಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ 500 ಹಾಸಿಗೆ ಸಾಮರ್ಥ್ಯಕ್ಕೇರಿಸಿ ಒಪ್ಪಿಗೆ ನೀಡಿದರೆ ನೂರಾರು ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ 272 ಹಾಸಿಗೆಗಳಿವೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದ ವಾರ್ಷಿಕ 50 ಸಾವಿರಕ್ಕಿಂತಲೂ ಅಧಿಕ ಹೊರ ರೋಗಿಗಳು, ಸುಮಾರು 15 ಸಾವಿರ ಒಳರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.
Related Articles
ಪ್ರಸ್ತುತ ಆಸ್ಪತ್ರೆಯ ಆವರಣದಲ್ಲಿ ಕೇಂದ್ರ ಸರಕಾರದ ಎನ್‌ಆರ್‌ಎಚ್‌ಎಂ ಯೋಜನೆಯಡಿ ನಿರ್ಮಾಣವಾ ಗುತ್ತಿರುವ 10.46 ಕೋ.ರೂ. ವೆಚ್ಚದ ಎಂಸಿಎಚ್ ( ತಾಯಿ ಮತ್ತು ಮಗು ಆರೋಗ್ಯ ) ವಿಭಾಗ 60 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಲರ್, ನೆಲಮಹಡಿ ಹಾಗೂ 1ನೇ ಮಹಡಿ ಯನ್ನು ಒಳಗೊಂಡಿದ್ದು ಒಟ್ಟು 3,989 ಚ.ಮಿ. ವಿಸ್ತೀರ್ಣ ಹೊಂದಿದೆ. ಸೆಲ್ಲರ್‌ನಲ್ಲಿ ಆಡುಗೆ ಕೋಣೆ , ಔಷಧ ಮಳಿಗೆ ಇರಲಿದ್ದು, 756 ಚದರ ಮೀ. ವಿಸ್ತೀರ್ಣವಿದೆ. ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ವಾರ್ಡ್, ಒಪಿಡಿ, ಶಸ್ತ್ರಚಿಕಿತ್ಸಾ ಕೊಠಡಿ, ಕನ್ಸಲ್ಟೆನ್ಸಿ ವಿಭಾಗಗಳಿರುತ್ತವೆ. ಮುಂದಿನ ವರ್ಷ ಸಾರ್ವಜನಿಕರಿಗೆ ಈ ವಿಭಾಗ ಲಭ್ಯವಾಗುವ ಸಾಧ್ಯತೆಯಿದೆ. ಇದು ಬಳಕೆಗೆ ನಿಲುಕಿದರೆ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಲೇಡಿಗೋಷನ್ ಅನ್ನು ಅಶ್ರಯಿಸುವವರು ಕಡಿಮೆಯಾಗಬಹುದು.
Advertisement
ಹೊಸ ಕಟ್ಟಡ 3 ತಿಂಗಳಲ್ಲಿ ಕಾರ್ಯಾರಂಭ ನಿರೀಕ್ಷೆ ಒಎನ್‌ಜಿಸಿ- ಎಂಆರ್‌ಪಿಎಲ್ ನೆರವಿ ನೊಂದಿಗೆ 21.70 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಕಟ್ಟಡ 3 ತಿಂಗಳೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. 1.30 ಲಕ್ಷ ಚದರ ಅಡಿ ವಿಸ್ತೀರ್ಣದ 5 ಮಹಡಿಗಳ ಈ ಕಟ್ಟಡದಲ್ಲಿ 226 ಹಾಸಿಗೆಗಳು, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಸೌಲಭ್ಯ ಹಾಗೂ ಸಲಕರಣೆಗಳ ಅಳವಡಿಕೆಗೆ ರಾಜ್ಯ ಸರಕಾರದಿಂದ ಈಗಾಗಲೇ 10 ಕೋ.ರೂ. ಬಿಡುಗಡೆಯಾಗಿದೆ. ಇದು ಉದ್ಘಾಟನೆಯಾದ ಬಳಿಕ ಈಗ ಇರುವ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತಿ ರುವ ಬಹುತೇಕ ವಿಭಾಗಗಳು ಇಲ್ಲಿಗೆ ವರ್ಗಾವಣೆಯಾಗಲಿವೆ. 500 ಬೆಡ್‌ಗೆ ಸ್ಥಳಾವಕಾಶ ಸಾಧ್ಯ
ಈಗ ಇರುವ ಹಳೆ ಕಟ್ಟಡದಲ್ಲಿ ಮತ್ತು ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ 500 ಹಾಸಿಗೆಗಳನ್ನು ಅಳವಡಿಸಲು ಸಾಧ್ಯವಿದೆ. ಹೊಸ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯಗಳೂ ಲಭ್ಯವಾಗಲಿವೆ. ಅದುದರಿಂದ 500 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಹೆಚ್ಚಿನ ಹೊರೆಯಾಗದು. ಈ ನಿಟ್ಟಿನಲ್ಲಿ ಸರಕಾರದಿಂದ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ಪೂರಕ ಕ್ರಮಗಳು ಅವಶ್ಯವಿದೆ. – ಕೇಶವ ಕುಂದರ್