Advertisement

UI Movie: ಈ ದಿನ ಸಿಗಲಿದೆ ಉಪ್ಪಿ ʼಯುಐʼ ಚಿತ್ರದ ಬಗ್ಗೆ ಬಿಗ್‌ ಅಪ್ಡೇಟ್

07:15 PM Aug 14, 2024 | Team Udayavani |

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ (Upendra) ಅವರ ಬಹುನಿರೀಕ್ಷಿತ ʼಯುಐʼ(UI Movie) ಚಿತ್ರದ ಕುರಿತು ಕುತೂಹಲ ಹೆಚ್ಚಾಗಿದೆ. ಸಿನಿಮಾ ಅನೌನ್ಸ್‌ ಆದ ದಿನದಿಂದ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇದೆ.

Advertisement

ಈಗಾಗಲೇ ತನ್ನ ಟೈಟಲ್‌ನಿಂದಲೇ ಸಖತ್‌ ಸದ್ದು ಮಾಡಿರುವ ʼಯುಐʼ ಸಿನಿಮಾ ರಿಲೀಸ್‌ಗೂ ಮುನ್ನ ವಿಭಿನ್ನ ಪ್ರಚಾರದಿಂದ ಸದ್ದು ಮಾಡುತ್ತಿದೆ. ʼಚಿಕ್ಕದು – ದೊಡ್ಡದುʼ ಎನ್ನುವ ಹಾಡಿನ ಪ್ರೋಮೊ ಬಿಟ್ಟು ತಲೆಗೆ ಹುಳು ಬಿಟ್ಟಿದ್ದ ಉಪ್ಪಿ ಆ ಬಳಿಕ ಟೀಸರ್, ʼಟ್ರೋಲ್‌ʼ ಹಾಡನ್ನು ರಿಲೀಸ್‌ ಗಮನ ಸೆಳೆದಿದ್ದರು.

ಸಿನಿಮಾದ ಹಾಡುಗಳಿಗಾಗಿ ಸಾಕಷ್ಟು ಪರಿಶ್ರಮವಹಿಸಿರುವ ಉಪ್ಪಿ ಸಿನಿಮಾದ ಬಗ್ಗೆ ಹೊಸದಾಗಿ ಅಪ್ಡೇಟ್‌ವೊಂದನ್ನು ನೀಡಲು ಸಜ್ಜಾಗಿದ್ದಾರೆ.

ಕಲಿಯುಗದ ಕಥೆಯನ್ನು ವಿಭಿನ್ನವಾಗಿ ಉಪ್ಪಿ ಹೇಳಲಿದ್ದಾರೆ ಎನ್ನಲಾಗುತ್ತಿದ್ದು, ಸಿನಿಮಾದ ಕುರಿತ ಬಿಗ್‌ ಅಪ್ಡೇಟ್‌ ವೊಂದು ಬರಲಿರುವ ಬಗ್ಗೆ ಉಪ್ಪಿ ಮಾಹಿತಿ ನೀಡಿದ್ದಾರೆ.

Advertisement

ಆಗಸ್ಟ್‌ 16ರಂದು ಬಿಗ್‌ ಅನೌನ್ಸ್ ಮೆಂಟ್‌ ಆಗಲಿದೆ ಎಂದು ಉಪ್ಪಿ ಹೇಳಿದ್ದಾರೆ. ಮೂಲಗಳ ಪ್ರಕಾರ ಸಿನಿಮಾದ ರಿಲೀಸ್‌ ಹಾಗೂ ಟ್ರೇಲರ್‌ ಕುರಿತು ಅಪ್ಡೇಟ್‌ ಸಿಗಲಿದೆ ಎನ್ನಲಾಗಿದೆ.

ಉಪೇಂದ್ರ ನಿರ್ದೇಶನದ ‌ʼಯುಐʼ ಸಿನಿಮಾಕ್ಕೆ ಕೆ.ಪಿ ಶ್ರೀಕಾಂತ್, ಜಿ.ಮನೋಹರನ್‌ ಬಂಡವಾಳ ಹಾಕಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next