Advertisement

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

11:00 AM May 18, 2024 | Team Udayavani |

ತುಂಬಾ ದಿನಗಳ ನಂತರ ಚಿತ್ರಮಂದಿರದೊಳಗೆ ಮತ್ತೆ ಶಿಳ್ಳೆ, ಚಪ್ಪಾಳೆ, ಜೈಕಾರ ಕೇಳಿಬಂದಿದೆ. ಹಾಡು ಬಂದಾಗ ಸ್ಕ್ರೀನ್‌ ಮುಂದೆ ಅಭಿಮಾನಿಗಳು ಕುಣಿದಿದ್ದಾರೆ. ನಾಯಕನ ಎಂಟ್ರಿಗೆ ದೀಪ ಬೆಳಗಾಗಿದ್ದಾರೆ. ಪಂಚ್‌ ಡೈಲಾಗ್‌ಗೆ ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು “ಎ’ ಸಿನಿಮಾ.

Advertisement

ಉಪೇಂದ್ರ ನಿರ್ದೇಶನ, ನಟನೆಯ “ಎ’ ಚಿತ್ರ ಶುಕ್ರವಾರ ಮರುಬಿಡುಗಡೆಯಾಗಿದೆ. ಸಾಮಾನ್ಯವಾಗಿ ಮರುಬಿಡುಗಡೆ ಎಂದಾಗ ದೊಡ್ಡ ಮಟ್ಟದ ಓಪನಿಂಗ್‌ ಸಿಗುವುದಿಲ್ಲ ಎಂಬ ಮಾತಿದೆ. ಆದರೆ, “ಎ’ ಚಿತ್ರ ಆ ಮಾತನ್ನು ಸುಳ್ಳು ಮಾಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಮೋಡ ಕವಿದ ವಾತಾವರಣವಿದ್ದರೂ ಸಿನಿಮಾ ಪ್ರೇಮಿಗಳು ಮಾತ್ರ ನಗರದ ನರ್ತಕಿ ಸೇರಿದಂತೆ ಬೇರೆ ಬೇರೆ ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನ ಸೂಪರ್‌ ಹಿಟ್‌ ಸಿನಿಮಾವನ್ನು ಮತ್ತೂಮ್ಮೆ ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳುವ ಅವಕಾಶವನ್ನು ಮಿಸ್‌ ಮಾಡಿಲ್ಲ. ಅದೇ ಕಾರಣದಿಂದ “ಎ’ ಚಿತ್ರ ಭರ್ಜರಿ ಓಪನಿಂಗ್‌ ಪಡೆದುಕೊಂಡಿದೆ.

ಉಪೇಂದ್ರ ನಿರ್ದೇಶನದ ಜೊತೆಗೆ ನಾಯಕರಾಗಿರುವ “ಎ’ ಚಿತ್ರ 1998ರಲ್ಲಿ ತೆರೆಕಂಡು ದೊಡ್ಡ ಹಿಟ್‌ ಆಗಿತ್ತು. ಚಿತ್ರದ ಕಥೆಯ ಜೊತೆಗೆ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದ್ದವು. ಅಂದಿನ ಕಾಲಕ್ಕೆ ಆ ಚಿತ್ರ ಹೊಸ ಕಾನ್ಸೆಪ್ಟ್ನಿಂದ ಸಿನಿಪ್ರೇಮಿಗಳ ಹುಬ್ಬೇರಿಸಿದ್ದು ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next