Advertisement
ಇಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಉಪ್ಪಿ, ಪ್ರಜಾಕೀಯದಲ್ಲಿ ಕೆಲಸಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಹೊರತು ಕೆಲಸ ಮಾಡದೆ ಫೇಮಸ್ ಆಗೋದಕ್ಕೆ ಅವಕಾಶ ಇಲ್ಲ ಎಂದಿದ್ದಾರೆ.
Related Articles
Advertisement
ವಿಪ್ರೋ ಕಂಪನಿಯಲ್ಲಿ ಫೇಮಸ್ ವ್ಯಕ್ತಿಗಳು ಯಾರು? Azim Premji. ಎರಡನೇ ವ್ಯಕ್ತಿ? ಗೊತ್ತಿಲ್ಲ!
ಮೈಕ್ರೋ ಸಾಫ್ಟ್ ಕಂಪನಿಯಲ್ಲಿ ಫೇಮಸ್ ವ್ಯಕ್ತಿಗಳು ಯಾರು? Bill Gates. ಎರಡನೇ ವ್ಯಕ್ತಿ? CEO Satya Nadella, ಮೂರನೇ ವ್ಯಕ್ತಿ ಗೊತ್ತಿಲ್ಲ!
ಇನ್ಫೋಸಿಸ್ ಕಂಪನಿಯಲ್ಲಿ ಫೇಮಸ್ ವ್ಯಕ್ತಿಗಳು ಯಾರು? ನಾರಾಯಣ ಮೂರ್ತಿ. ಎರಡನೇ ವ್ಯಕ್ತಿ? CEO ಗೊತ್ತಿಲ್ಲ!
Google ಕಂಪನಿಯಲ್ಲಿ ಫೇಮಸ್ ವ್ಯಕ್ತಿಗಳು ಯಾರು? Sundar Pichai. ಎರಡನೇ ವ್ಯಕ್ತಿ? ಗೊತ್ತಿಲ್ಲ!
ಏರ್ಟೆಲ್ ಕಂಪನಿಯಲ್ಲಿ ಫೇಮಸ್ ವ್ಯಕ್ತಿಗಳು ಯಾರು? ಒಬ್ಬರು ಗೊತ್ತಿಲ್ಲ!
#ಪ್ರಜಾಕೀಯದಲ್ಲಿ ಫೇಮಸ್ ವ್ಯಕ್ತಿಗಳು ಯಾರು? Upendra Kumar ! ಎರಡನೇ ವ್ಯಕ್ತಿ? ಯಾರು ಇಲ್ಲ! ನನಗಂತೂ ಗೊತ್ತಿಲ್ಲ!
ರಾಜಕೀಯದಲ್ಲಿ ಫೇಮಸ್ ವ್ಯಕ್ತಿಗಳು ಯಾರು? ಅಬ್ಬಾ ಇಲ್ಲಿ ಎಂತಾ ಅವಿದ್ಯಾವಂತನಿಗೆ ಕೇಳಿದರು ಕಡಿಮೆ ಎಂದರು 2 ಡಜನ್ ಹೆಸರು ಹೇಳುತ್ತಾನೆ. ಅಂದರೆ ಫೇಮಸ್ ವ್ಯಕ್ತಿಗಳ ದಂಡೆ ಇದೇ! ಫುಲ್ ಫೇಮಸ್!
ಈಗ ವಿಷಯಕ್ಕೆ ಬರೋಣ….!
ನಿಮಗೆ ಮೇಲೆ ಹೇಳಿದ ಕಂಪನಿಯ ಹೆಸರುಗಳು ಗೊತ್ತು. ಆದರೆ ಅದರಲ್ಲಿರುವ ಫೇಮಸ್ ವ್ಯಕ್ತಿಗಳು ಯಾರು ಎಂದರೆ #CEO ಬಿಟ್ಟು ಬೇರೆ ಯಾರೂ ಸಹ ಗೊತ್ತಿಲ್ಲ. ಮತ್ತೆ ಕೆಲವು ಫೌಂಡರ್ ಹೆಸರು ಗೊತ್ತು. ಈ ಕಂಪನಿಗಳ ವ್ಯವಹಾರ ಒಂದು ವರ್ಷಕ್ಕೆ ಸಾವಿರ ಕೋಟಿಗಳಲ್ಲಿ. ಮತ್ತೆ ಒಂದು ತಿಂಗಳಿಗೆ ಕೋಟಿ ರೂಪಾಯಿಗಳಲ್ಲಿ Employees ಗೆ Salary ಕೂಡುತ್ತಾರೆ.
ಇಲ್ಲಿ ಲಕ್ಷ ಗಟ್ಟಲೆ Employees ಇದ್ದಾರೆ. ಆದರೆ ಯಾರು ಸಹ ಫೇಮಸ್ ಇರುವುದಿಲ್ಲ. ಒಂದು ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡುವವರನ್ನು ಬಿಟ್ಟು ಇನ್ನೊಬ್ಬರಿಗೆ ಗೊತ್ತಿರುವುದಿಲ್ಲ. ಅಂದರೆ ಇಲ್ಲಿ ಫೇಮಸ್ ಅನ್ನೊ ಪದಕ್ಕೆ ಅರ್ಥ ಇರುವುದಿಲ್ಲ. ಆದರೆ ಕೆಲಸ ಎಂಬ ಪದಕ್ಕೆ ದೊಡ್ಡ ಅರ್ಥ ಇರುತ್ತದೆ. ಒಬ್ಬ ವ್ಯಕ್ತಿ ಕೆಲಸ ಒಳ್ಳೆ ಮಾಡುತ್ತಾನೆ ಎಂದರೆ ಅವನಿಗೆ ಹೆಚ್ಚು salary ಹಾಗೂ promotion ಸಿಗುತ್ತದೆ. ಇಲ್ಲಿ ಯಾರೂ ಫೇಮಸ್ ಆಗಬೇಕು ಎಂದು ಕೆಲಸ ಮಾಡುವುದಿಲ್ಲ. ಕೊಟ್ಟ ಕೆಲಸ ಟೈಮ್ ಗೆ ಸರಿಯಾಗಿ ಮುಗಿಸಬೇಕು ಎಂದು ಮಾತ್ರ.
ಇಲ್ಲಿ ಪ್ರತಿ ಒಬ್ಬರನ್ನು ಇನ್ನೊಬ್ಬರು & SOP ವಾಚ್ ಮಾಡುತ್ತಿರುತ್ತದೆ. i.e ಇಲ್ಲಿ ಯಾರೇ ತಪ್ಪು ಮಾಡಿದರೂ ಇನ್ನೊಬ್ಬರು ಪ್ರಶ್ನೆ ಮಾಡಲು ರೆಡಿ ಇರುತ್ತಾರೆ. ಇಲ್ಲಿ ತಪ್ಪಿಗೆ ಅವಕಾಶ ಇರುವುದಿಲ್ಲ. ಇನ್ನೂ Curruption ಕೆಳಕೂಡದು.
ಇನ್ನೂ ಫೇಮಸ್ ವ್ಯಕ್ತಿಗಳ ವಿಷಯಕ್ಕೆ ಬಂದರೆ ಇಲ್ಲಿ ಕೆಲಸಕ್ಕೆ ಅಷ್ಟೋಂದು ಮಹತ್ವ ಇಲ್ಲ, ಅಂದರೆ ರಾಜಕೀಯ ವ್ಯಕ್ತಿಗಳು. ಇವರಿಗೆ ಫೇಮಸ್ ಹುಚ್ಚು. ಎಲ್ಲರೂ ಸಿಎಂ ಆಗಬೇಕು, ಎಲ್ಲರೂ ಮಿನಿಸ್ಟರ್ ಆಗಬೇಕು. ಚುನಾವಣೆ ಬಂತೆಂದರೆ ಯಾರು ಹೆಚ್ಚು ಫೇಮಸ್ ಅನ್ನೋ ಮಾನದಂಡ ಬೇರೆ. ನಮ್ಮ ಪ್ರಜೆಗಳಿಗೂ ಅದೇ ಬೇಕಿರುವುದು, ಅವರಿಗೆ ಯಾರು ಕೆಲಸ ಮಾಡಬವುದು ಎಂಬ ಸರಳ ಯೋಚನೆ ಮಾಡುವುದಿಲ್ಲ. ಈ ಫೇಮಸ್ ಹೆಚ್ಚಿಸಿಕೊಳ್ಳಲು ಭ್ರಷ್ಟಚಾರ ಮಾಡುತ್ತಾರೆ. ಇಲ್ಲಿ Curruption ಬಗ್ಗೆ ಮಾತಾಡಬೇಡಿ. ಇದು ಇಲ್ಲಿ ಕಾಮನ್.
Conclusion
ವ್ಯಕ್ತಿ ಫೇಮಸ್ ಆದಷ್ಟು ಕೆಲಸ ಕಡಿಮೆ ಆಗುತ್ತಾ ಹೋಗುತ್ತದೆ. ಇನ್ನೂ ಹೆಚ್ಚು ವ್ಯಕ್ತಿಗಳು ಫೇಮಸ್ ಆದಷ್ಟು ಕೆಲಸ ದೇವರೇ ಮಾಡಬೇಕು. ಫೇಮಸ್ ಅನ್ನುವುದು ಭಾಯಲ್ಲಿ ಹೇಳಲು ಚಂದ, ಅದರಿಂದ ಸಮಸ್ಯೆಗಳು ಜಾಸ್ತಿ ಆಗುತ್ತಾ ಹೋಗುತ್ತದೆ. ರಾಜಕೀಯ ಒಂದು ದೊಡ್ದ ಉದಾಹರಣೆ.
#ಪ್ರಜಾಕೀಯ ದಲ್ಲಿ ಕೆಲಸಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಇಲ್ಲಿ ಫೇಮಸ್ ಅನ್ನೊ ಪದಕ್ಕೆ ಅರ್ಥ ಇರುವುದಿಲ್ಲ.
ಜೈ #Prajaakeeya