Advertisement

ಮೇನಲ್ಲಿ ಉಪೇಂದ್ರ ಐ ಲವ್‌ ಯು ಚಿತ್ರ ತೆರೆಗೆ

09:30 AM Apr 19, 2019 | Team Udayavani |

ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಉಪೆಂದ್ರ ಅಭಿನಯದ “ಐ ಲವ್‌ ಯು’ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿರುವುದರಿಂದ, ಅಲ್ಲದೆ ಚಿತ್ರದ ನಾಯಕ ನಟ ಉಪೇಂದ್ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪ್ರಜಾಕೀಯ ಪಕ್ಷದ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿರುವುದರಿಂದ, ಚಿತ್ರದ ಬಿಡುಗಡೆಯನ್ನು ಕೆಲಕಾಲ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

Advertisement

ಚುನಾವಣಾ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತಂದರೆ, ನಿರೀಕ್ಷಿತ ರೀತಿಯಲ್ಲಿ ಪ್ರೇಕ್ಷಕರನ್ನು ತಲುಪುವುದು ಕಷ್ಟವಾಗಬಹುದು ಎಂಬ ಕಾರಣಕ್ಕೆ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆಯಂತೆ. ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರಲಿದೆ. ಆರ್‌.ಚಂದ್ರು ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಡಾ.ಕಿರಣ್‌ ಸಂಗೀತ ನೀಡಿದ್ದಾರೆ.

ಸುಜ್ಞಾನ್‌ ಛಾಯಾಗ್ರಹಣ, ದೀಪು.ಎಸ್‌.ಕುಮಾರ್‌ ಸಂಕಲನ, ವಿನೋದ್‌, ಗಣೇಶ್‌ ಸಾಹಸ ನಿರ್ದೇಶನ, ಚಿನ್ನಿಪ್ರಕಾಶ್‌, ಶಂಕರ್‌, ಧನುಕುಮಾರ್‌ ನೃತ್ಯ ನಿರ್ದೇಶ‌ನ ಹಾಗೂ ಮೋಹನ್‌ ಬಿ ಕೆರೆ ಕಲಾ ನಿರ್ದೇಶನವಿದೆ. ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ರಚಿತಾರಾಂ, ಸೋನು ಗೌಡ, ಬ್ರಹ್ಮಾನಂದಂ, ಜೈಜಗದೀಶ್‌, ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next