ಎದುರಾಗುತ್ತಾರೆ. ಇವರ ಮೂಲ ಹೆಸರು ನಟೇಶ್ ಪೋಲೇಪಲ್ಲಿ. ಬರಹಗಾರರು, ವಾಸ್ತು ತಜ್ಞರು, ಅಧ್ಯಾತ್ಮಿಕ ಚಿಂತಕರು. ಉಪೇಂದ್ರರ
ಥಿಂಕ್‌ಟ್ಯಾಂಕರ್ ಕೂಡ. ಉಪ್ಪಿ ರಾಜಕೀಯ ರಂಗಕ್ಕೆ ಹೆಜ್ಜೆ ಊರಲು ಇವರ ಪಾಲೂ ಇದೆ. ಪರದೆ ಹಿಂದಿನ ಅನೇಕ “ಬುದ್ಧಿವಂತನ’ ಸತ್ಯಗಳನ್ನು
“ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
Advertisement
ಉಪೇಂದ್ರ ಅವರು ರಾಜಕೀಯಕ್ಕೆ ಬರುವ ನಿರ್ಧಾರ ಸರೀನಾ? ಖಂಡಿತ ಸರಿ. ಇದರಲ್ಲಿ ತಪ್ಪೇನಿದೆ ಹೇಳಿ? ಕೆಟ್ಟಿರೋ ವ್ಯವಸ್ಥೆಗೆ ಚಿಕಿತ್ಸೆ ಕೊಡೋಕೆ ಬಂದಿದ್ದಾರೆ. 29 ವರ್ಷದ ಸ್ನೇಹದ ಆಧಾರದಲ್ಲಿ ಹೇಳುವುದಾದರೆ ಉಪ್ಪಿ ತಪ್ಪು ನಿರ್ಧಾರ ತಗೊಳ್ಳಲೇ ಇಲ್ಲ. ಸ್ನೇಹಿತರು, ಹಿತೈಷಿಗಳ ಕೇಳದೆ ತೀರ್ಮಾನ ತಗೊಂಡಿದ್ದಿಲ್ಲ. ನಿಮಗೆ ಗೊತ್ತಾ? ಹೀ ಈಸ್ ಗುಡ್ ಡಿಸಿಷನ್ ಮೇಕರ್, ಹೀ ಈಸ್ ಬೆಸ್ಟ್ ಸಜೆಶನ್ ಕಲೆಕ್ಟರ್, ಹೀ ಈಸ್ ದ ಅಲ್ಟಿಮೇಟ್ ಲಿಸನರ್. ಗಂಟೆಗಟ್ಟಲೆ ನೀವು ಹೇಳ್ಳೋದನ್ನು ಕೇಳ್ತಾರೆ. ಈ ಗುಣ ನರೇಂದ್ರ ಮೋದಿಯಲ್ಲೂ ಇದೆ. ಕೇಳ್ಳೋ ತಾಳ್ಮೆ ಇರೋರಿಗೆ ಮಾಡೋದು ಬಹಳ ಸುಲಭ.
ಉಪೇಂದ್ರರ ಬಗ್ಗೆ ಅಲ್ಲ. ವ್ಯವಸ್ಥೆ ಸರಿ ಇದ್ದಿದ್ದರೆ ಉಪ್ಪಿ ಪಾಲಿಟಿಕ್ಸ್‌ಗೆ ಬರ್ತಾನೇ ಇರಲಿಲ್ಲ. ಏನಾದರೂ ಸಮಸ್ಯೆ ಅಂದರೆ ಅದು ಮನುಷ್ಯನ ಕೈವಾಡವಾ, ನೇಚರ್ ಕೈವಾಡವ ನೋಡ್ತಾರೆ. ಅದನ್ನೂ ಮೀರಿದ್ದು ಏನಾದರೂ ಆಗಿದ್ದರೆ ಸರಿಪಡಿಸೋಕೆ ಚಡಪಡಿಸುತ್ತಾರೆ. ಈಗ ಮಾಡುತ್ತಿರುವುದೂ ಅದನ್ನೇ. ನಮ್ಮ ಜನ, ನಾಯಕರೂ ಇಬ್ಬರೂ ಭ್ರಷ್ಟವ್ಯವಸ್ಥೆಯಲ್ಲಿ ಸಿಲುಕಿದ್ದಾರೆ. ಅದರಿಂದ ಹೊರ ತರುವುದಕ್ಕೆ ಉಪ್ಪಿ ರಾಜಕೀಯಕ್ಕೆ ಧುಮುಕಿದ್ದಾರೆ. ಈ ರಾಜಕೀಯ ನಿರ್ಧಾರ ನಿನ್ನೆ, ಮೊನ್ನೆಯದಾ?
ಇಲ್ಲ, ಇಲ್ಲ. ಅವರಿಗೆ ಅದು ಇನ್‌ಬಿಲ್ಟ್ ನೇಚರ್. ಸ್ಪಂದಿಸುವ ಗುಣ ಮೊದಲಿಂದಲೂ ಇದೆ. ದೇಶದ ಬಗ್ಗೆ ಚಿಂತನೆ ಮಾಡೋದು, ಸಮಾಜದ ಸಮಸ್ಯೆಗಳನ್ನು ಬಿಡಿಸೋಕೆ ಹೊಸದೇನಾದರೂ ಮಾಡಬೇಕು ಅನ್ನೋ ಪ್ರಾಮಾಣಿಕ ತುಡಿತ ಎಷ್ಟೋ ವರ್ಷಗಳಿಂದ ನೋಡ್ತಾನೇ ಇದ್ದೀನಿ.
Related Articles
ಯಾವುದೇ ಪಕ್ಷವನ್ನಾಗಲೀ, ಯಾವುದೇ ವ್ಯಕ್ತಿಯನ್ನಾಗಲಿ ಬೈಯ್ಯೋದನ್ನು ನಾನು ನೋಡಿಯೇ ಇಲ್ಲ. ಅವರಿಗೆ ಮನಮೋಹನ್ ಸಿಂಗ್, ಮೋದಿ, ದೇವೇಗೌಡರು ಹೀಗೆ ಎಲ್ಲರ ಬಗ್ಗೆನೂ ಸಮಾನ ಗೌರವವಿದೆ. ಸಾರ್, ಸಿಬಿಐ ರೈಡ್ ಆಗ್ತಿದೆ ಅಂದರೆ. ಅದು ಸಮಸ್ಯೆನೇ ಅಲ್ಲ. ವ್ಯವಸ್ಥೆಯಲ್ಲಿ
ಲೋಪ ಇದೆ. ಅದನ್ನು ಮೊದಲು ಸರಿಪಡಿಸಬೇಕು. ಕಳ್ಳ ಮನೆಯಲ್ಲಿದ್ದರೂ, ಕಳ್ಳತನ ಆಗಬಾರದು ಮನೆಯ ಸಿಸ್ಟಮ್ ಆ ರೀತಿ ಇರಬೇಕು ಅಂತಾರೆ.
Advertisement
ರಾಜಕೀಯ ಅನ್ನೋದು ಕೆಸರಾಗಿದೆ. ಅದರಲ್ಲಿ ಇಳಿದರೆ ನಿಮ್ಮ ಸ್ನೇಹಿತರಿಗೂ ಅದು ಮೆತ್ತಿಕೊಳ್ಳಲ್ವೇ?ಆಗೊಲ್ಲ. ಸಿನಿಮಾದಲ್ಲಿ ದುಡೀತಾರೆ, ಸಂಬಳ ತಗೋತಾರೆ. ಪಾಲಿಟಿಕ್ಸ್‌ನಲ್ಲೂ ದುಡೀತಾರೆ, ಸಂಬಳ ತಗೋತಾರೆ ಅಷ್ಟೇ. ಉಪ್ಪಿಗೂ ಕಡುಬಡತನ ಇತ್ತು. ಚಿಕ್ಕ ಮನೆ. ಇಂಥ ಸಂದರ್ಭದಲ್ಲಿ ಅವರು ಕರಪ್ಟ್ ಆಗಬಹುದಿತ್ತು ಅಲ್ವಾ? ಆಗಲಿಲ್ಲ. ಎಪಿಎಸ್ ಕಾಲೇಜಲ್ಲಿ ಯಮಧರ್ಮರಾಯಣ ಅನ್ನೋ ನಾಟಕಮಾಡುತ್ತಿದ್ದರು. ಆಗ ಒಂದಷ್ಟು ಹಣ ಸಿಗುತ್ತಿತ್ತು. ಅದರಲ್ಲಿ ಖರ್ಚುಗಳನ್ನೆಲ್ಲ ತೆಗೆದು ಬರಿಗೈಯಲ್ಲಿ ಮನೆಗೆ ಹೋಗುತ್ತಿದ್ದರು. ಅಂದಿನ ಆ ಅಕೌಂಟೆಬಲಿಟಿ ಇಂದಿಗೂ ಕಾಪಾಡಿಕೊಂಡಿದ್ದಾರೆ. ಅಂದರೆ, ಹಸಿವು, ಬಡತನ ಇದ್ದಾಗ ಹುಟ್ಟುವ ಆಸೆ ಇದೆಯಲ್ಲ, ಅದಕ್ಕೆ ಯಾರನ್ನ ಬೇಕಾದರೂ ಕರಪ್ಟ್ ಮಾಡುವ ಶಕ್ತಿ ಇರುತ್ತದೆ. ಉಪ್ಪಿಗೆ ಇವ್ಯಾವುದೂ ನಾಟಲಿಲ್ಲ. ಇನ್ನು ಕೆಸರು ಮೆತ್ತಿಕೊಳ್ಳೋದು ಹೇಗೆ ಹೇಳಿ? ಉಪ್ಪಿ ಚಿತ್ರರಂಗಕ್ಕೆ ಬಂದಿದ್ದು ರಾಜಕೀಯ ಸೇರಕ್ಕಾ?
ಹಾಗಂತಲ್ಲ, ಅವರು ಚಿತ್ರರಂಗದಲ್ಲಿ ತೃಪ್ತಿ ಪಡೋಕೆ ಶುರು ಮಾಡಿದರು. ತೃಪ್ತಿ ಅಂದರೇನು? ಸಿನಿಮಾ ಮೂಲಕ ಸಮಾಜದ ಅಂಕುಡೊಂಕುಗಳ ಕರೆಕ್ಷನ್ ಹಾಕ್ತಾ ಹೋದರು. ಜನರನ್ನು ಸರಿ ಮಾಡೋದು ಹೇಗೆ? ಚಿತ್ರದ ಮೂಲಕ ಜನಕ್ಕೆ ಮೆಸೇಜ್‌ಗಳನ್ನು ಕೊಡಬಹುದಾ? ಅನ್ನೋ ಪ್ರಯೋಗ ಶುರು ಮಾಡಿದರು. ಈಗ ಹೇಳಿ ಉಪ್ಪಿ ಸೋತರೆ ಮುಂದೇನು?
ಉಪ್ಪಿಗೂ ನನಗೂ ಸೋಲೂ ಗೆಲುವೆ. ಸೋತಾಗ ಹತಾಶರಾ ಗೋದು, ಗೆದ್ದಾಗ ಅಹಂಕಾರ ಪಡೋದು ಇಲ್ಲವೇ ಇಲ್ಲ. ಉಪ್ಪಿ ಗೆಲುವಿನಂತೆ ಸೋಲನ್ನು ಬಹಳ ಎಂಜಾಯ್ ಮಾಡ್ತಾರೆ. ರಾಜ ಕಾರಣದಲ್ಲಿ ಸೋತರೆ ಚಿತ್ರರಂಗ ಇದೆಯಲ್ಲಾ? ಉಪ್ಪಿ ಒಬ್ಬರೇ ಗೆದ್ದರೆ ಅವರ ಏರಿಯಾವನ್ನು ಜನ ತಿರುಗಿ ನೋಡುವ ಹಾಗೇ ಮಾಡ್ತಾರೆ. 10 ಜನ ಗೆದ್ದರು ಅಂತಿಟ್ಟುಕೊಳ್ಳಿ ದೇಶವೇ ಇವರ ಕಡೆ ತಿರುಗುವ ಹಾಗೇ ಮಾಡ್ತಾರೆ. 200 ಸೀಟು ಬಂದರೆ ಇಡೀ ಜಗತ್ತೇ ಇವರ ಕಡೆ ನೋಡುವ ಹಾಗೇ ಮಾಡ್ತಾರೆ. ಸಂದರ್ಶನ: ಕಟ್ಟೆ ಗುರುರಾಜ್