ಹಾಡುಗಳು ಹಿಟ್ ಆದರೆ ಅರ್ಧ ಸಿನಿಮಾ ಹಿಟ್ ಆದಂತೆ ಎಂಬ ನಂಬಿಕೆ ಸಿನಿಮಾ ಮಂದಿಯದ್ದು. ಏಕೆಂದರೆ ಸಿನಿಮಾದ ಹಾಡುಗಳು ಮೊದಲ ಆಹ್ವಾನ. ಅದೇ ಕಾರಣದಿಂದ ಹಾಡುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತವೆ.
ಈಗ ಉಪೇಂದ್ರ ನಿರ್ದೇಶನ, ನಟನೆಯ “ಯುಐ’ ಸಿನಿಮಾ ಕೂಡಾ ಹಾಡುಗಳನ್ನು ಹೆಚ್ಚು ಆಕರ್ಷಣೀಯ ಹಾಗೂ ವಿಭಿನ್ನತೆಯಿಂದ ಮಾಡುತ್ತಿದೆ. ಅದಕ್ಕಾಗಿ ಹಂಗೇರಿಯಾದ ಬುಡಾಪೇಸ್ಟ್‌ಗೆ ಹೋಗಿದ್ದು, ಅಲ್ಲಿ 90-ಪೀಸ್ ಆರ್ಕೆಸ್ಟ್ರಾ ಬಳಸಿ ಸಂಗೀತವನ್ನು ರೆಕಾರ್ಡ್ ಮಾಡಲಾಗುತ್ತಿದ್ದು, ಹಿನ್ನೆಲೆ ಸಂಗೀತವನ್ನು ಬಿ ಅಜನೀಶ್ ಲೋಕನಾಥ್ ನೀಡುತ್ತಿದ್ದಾರೆ.
ನೂರಾರು ಮಂದಿ ಒಂದೇ ಬಾರಿಗೆ ಸಂಗೀತವನ್ನು ನುಡಿಸಿ ಅದನ್ನು ಲೈವ್ ಆಗಿ ರೆಕಾರ್ಡ್ ಮಾಡಲಾಗುತ್ತದೆ. ಬುಡಾಪೆಸ್ಟ್‌ನ ವಿಶ್ವದರ್ಜೆಯ ಸಂಗೀತ ಗುಣಮಟ್ಟವನ್ನು ನೀಡಲು ಸಹಕರಿಯಾಗುತ್ತದೆ. ಇದೇ ಕಾರಣದಿಂದ ಸಿನಿಮಾ ತಂಡಗಳು ಅಲ್ಲಿಗೆ ಹೋಗುತ್ತಿವೆ. ಕನ್ನಡದ “ವಿಕ್ರಾಂತ್ ರೋಣ’, “ಕೆಜಿಎಫ್ 2′ ಸಿನಿಮಾಗಳ ಸಂಗೀತವನ್ನು ಬುಡಾಪೆಸ್ಟ್‌ನಲ್ಲಿ ರೆಕಾರ್ಡ್ ಮಾಡಲಾಗಿತ್ತು.
ತೆಲುಗಿನ ಕೆಲವು ಸಿನಿಮಾಗಳು ಸಂಗೀತವನ್ನು ಸಹ ಈ ಹಿಂದೆ ಬುಡಾಪೆಸ್ಟ್‌ನಲ್ಲಿ ರೆಕಾರ್ಡ್ ಮಾಡಿದ್ದರು. ಆದರೆ “ಯುಐ’ ಸಿನಿಮಾಕ್ಕಾಗಿ ಪೂರ್ಣ 90-ಪೀಸ್ ಆರ್ಕೆಸ್ಟ್ರಾ ಬಳಸಿಕೊಂಡು ಸಂಗೀತ ರೆಕಾರ್ಡ್ ಮಾಡಲಾಗುತ್ತಿದೆ. ಈ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ನಿರ್ಮಾಣ ಮಾಡುತ್ತಿದೆ.
ಇದಲ್ಲದೇ ಚಿತ್ರದ “ಯು-ಐ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರೇಕ್ಷಕರಿಗೆ ಹೊಸದೇನೋ ನೀಡಬೇಕೆಂದು ಚಿತ್ರತಂಡ ಪ್ರಯತ್ನಿಸುತ್ತಿರುವುದಂತೂ ಸುಳಲ್ಲ.