Advertisement

Google Chrome ತಪ್ಪದೇ ಅಪ್‌ಡೇಟ್‌ ಮಾಡಿ: ಮಾಡುವುದು ಹೇಗೆ?

12:40 AM Feb 25, 2024 | Team Udayavani |

ಹೊಸದಿಲ್ಲಿ : ಡೆಸ್ಕ್ ಟಾಪ್‌ ಕಂಪ್ಯೂಟರ್‌ಗಳಲ್ಲಿ ಇಂಟರ್‌ನೆಟ್‌ ಶೋಧಕ್ಕಾಗಿ ಗೂಗಲ್‌ ಕ್ರೋಮ್‌ ಬಳಕೆ ವೇಳೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.

Advertisement

ಅದರಲ್ಲಿ ತೀವ್ರವಾಗಿರುವ ತಾಂತ್ರಿಕ ಲೋಪಗಳಿವೆ. ಹೀಗಾಗಿ, ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಮಾಹಿತಿಯ ಮೇಲೆ ಕನ್ನ ಹಾಕುವ ಸಾಧ್ಯತೆಗಳು ಇವೆ ಎಂದು ಕೇಂದ್ರ ಸರಕಾರದ ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್‌) ಎಚ್ಚರಿಕೆಯ ಸಂದೇಶ ರವಾನಿಸಿದೆ.

ಈ ದೋಷಗಳನ್ನು ಬಳಸಿ, ಸೂಕ್ಷ್ಮ ಮಾಹಿತಿಯನ್ನು ಹ್ಯಾಕರ್‌ಗಳು ಕದಿಯಬಹುದು. ಈ ದೋಷಗಳು ವಿಂಡೋಸ್‌, ಮ್ಯಾಕ್ಸ್‌, ಲಿನಕ್ಸ್‌ನ ಹಿಂದಿನ ಗೂಗಲ್‌ ಕ್ರೋಮ್‌ ಆವೃತ್ತಿ ಗಳಲ್ಲಿವೆ.

ಅಪ್‌ಡೇಟ್‌ ಹೇಗೆ?
ಡೆಸ್ಕ್ಟಾಪ್‌ನ ಗೂಗಲ್‌ ಕ್ರೋಮ್‌ ಓಪನ್‌ ಮಾಡಿ.
ಬಲ ಮೂಲೆಯಲ್ಲಿರುವ ಮೂರು ಲಂಬ ಚುಕ್ಕೆಗಳ ಮೇಲೆ ಕ್ಲಿಕ್‌ ಮಾಡಿ.
ಅನಂತರ ಮೆನು ಗೆ ಹೋಗಿ, “ಹೆಲ್ಪ್’ ಬಟನ್‌ ಪ್ರಸ್‌ ಮಾಡಿ
ಬಳಿಕ “ಎಬೌಟ್‌ ಗೂಗಲ್‌ ಕ್ರೋಮ್‌’ ಆಯ್ಕೆ ಮಾಡಿ.
ಅಪ್‌ಡೇಟ್‌ ಬಳಿಕ ಇನ್‌ಸ್ಟಾ ಲೇಶನ್‌ ಪೂರ್ಣಗೊಳ್ಳಲಿದೆ
ಅನಂತರ “ರೀಲಾಂಚ್‌’ ಬಟನ್‌ ಕ್ಲಿಕ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next