ಕೋವಿಡ್ ಲಾಕ್‌ಡೌನ್ ನಡುವೆಯೇ “ಅದೊಂದೂರಲಿ’ ಚಿತ್ರತಂಡ ಸೀಮಿತ ಅವಕಾಶಗಳನ್ನು ಬಳಸಿಕೊಂಡು ಸದ್ದಿಲ್ಲದೆ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ಶೂಟಿಂಗ್‌ಗೆ ತೆರಳಲು ರೆಡಿಯಾಗಿದೆ. ಸುಮಾರು ಎರಡು ತಿಂಗಳ ಲಾಕ್‌ಡೌನ್ ಸಮಯವನ್ನು ವ್ಯರ್ಥ ಮಾಡದೆ ಚಿತ್ರದ ಸ್ಕ್ರಿಪ್ಟ್, ಲೊಕೇಶನ್ ಪ್ಲಾನಿಂಗ್ ಮತ್ತಿತರ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ “ಅದೊಂದೂ ರಲಿ’ ಚಿತ್ರತಂಡ ಸದ್ಯ ಶೂಟಿಂಗ್ ಕೆಲಸಗಳತ್ತ ಗಮನ ಹರಿಸಿದೆ.
ಕೆಲ ವರ್ಷಗಳ ಹಿಂದೆ ಚಿಂತಾಮಣಿಯಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಫೋಟೋಗ್ರಾಫರ್‌ನೊಬ್ಬ ಬೇರೊಂದು ಊರಿಗೆ ಹೋದಾಗ ಒಂದಷ್ಟು ನಿಗೂಢ ಘಟನೆಗಳು ಸಂಭವಿಸುತ್ತದೆ. ಅದನ್ನುತನಿಖೆ ಮಾಡಲು ನಿಂತಾಗ ಏನೇನು ಸನ್ನಿವೇಶಗಳು ಎದುರಾಗುತ್ತವೆ. ಯಾವೆಲ್ಲ ರಹಸ್ಯಗಳು ಬಿಚ್ಚಿಕೊಳ್ಳುತ್ತದೆ ಎನ್ನುವುದು “ಅದೊಂದೂರಲಿ’ ಚಿತ್ರದ ಕಥೆಯ ಒಂದು ಎಳೆ.
ಈ ಹಿಂದೆ ಎರಡು ಚಿತ್ರಗಳಲ್ಲಿ ಅನುಭವವಿರುವ ಭಾರ್ಗವ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲೋಕೇಶ್ವರ ರಾವ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಶ್ರೀಹರಿ-ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ಭಾರ್ಗವ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿ, ಸಹ ನಿರ್ಮಾಪಕರಾಗಿದ್ದಾರೆ. ಸುವರ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
ಇದರೊಂದಿಗೆ ಇದೇ ತಂಡ ಮತ್ತೂಂದು ಹಾರರ್ ಸಿನಿಮಾಕ್ಕೂತಯಾರಿ ಮಾಡಿಕೊಂಡಿದೆ. ಸಾಮಾನ್ಯವಾಗಿ ಯಾವುದೇ ಹಾರರ್ ಸಿನಿಮಾಗಳಿಗೆ, ಅಂಥದ್ದೇ ಅರ್ಥ ಬರುವಂಥ ಟೈಟಲ್‌ಗಳೇ ಹೆಚ್ಚಾಗಿ ಇರುತ್ತವೆ. ಆದರೆ ಈ ಚಿತ್ರತಂಡ, ತಮ್ಮ ಸಿನಿಮಾದ ಸಬೆjಕ್ಟ್ ಹಾರರ್ ಆಗಿದ್ರೂ, ಟೈಟಲ್ ಮಾತ್ರ ಅದಕ್ಕೆ ವಿರುದ್ದವಾಗಿ ಇಟ್ಟಿದೆ. ಅಂದಹಾಗೆ, ಆ ಚಿತ್ರದ ಹೆಸರು “ಟೆಡ್ಡಿಬೇರ್’. “ಆದಿಲಕ್ಷ್ಮೀ ಪ್ರೂಡಕ್ಷನ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಎರಡೂ ಸಿನಿಮಾಗಳು ಸೆಪ್ಟಂಬರ್ ದಲ್ಲಿ ಶೂಟಿಂಗ್ ಮುಗಿಸಿ ಅಕ್ಟೋಬರ್‌ನಲ್ಲಿ ತೆರೆಗೆ ಬರುವ ಯೋಜನೆಯಲ್ಲಿವೆ.