Advertisement

ಟಾಪ್ ಗೇರ್: 2021ಕ್ಕೆ ಬೈಕ್‌ಗಳ ಸುಗ್ಗಿ

12:13 PM Dec 15, 2020 | Nagendra Trasi |

ಇನ್ನೇನು 2020 ಮುಗಿಯುತ್ತಾ ಬಂದಿತು. ಹಾಗೆಯೇ, 2021ಕ್ಕೂ ಸ್ವಾಗತ ಕೋರುವ ಹೊತ್ತು ಆಗಮಿಸುತ್ತಿದೆ. ಇದರ ನಡುವೆಯೇ 2021ರಲ್ಲಿ ಲಾಂಚ್‌ಗಾಗಿ
ಬೈಕ್‌ ಕಂಪನಿಗಳು ಸಾಲುಗಟ್ಟಿ ನಿಂತಿವೆ. ಇವುಗಳಲ್ಲಿ ಬಜಾಜ್‌ ಪಲ್ಸರ್‌, ರಾಯಲ್‌ ಎನ್‌ಫೀಲ್ಡ್‌, ಕವಾಸಾಕಿಕೂಡ ಸೇರಿವೆ.

Advertisement

1)ಬಜಾಜ್‌ ಪಲ್ಸರ್‌ ಆರ್‌ಎಸ್‌400
ಬಜಾಜ್ ‌ಕಂಪನಿಯ ಬಹು ನಿರೀಕ್ಷಿತ ಬೈಕ್‌ ಇದು. ಇದು 2021ರ ಜುಲೈನಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದರ ಅಂದಾಜು ದರ1.70 ಲಕ್ಷ ರೂ. ವಿಶೇಷವೆಂದರೆ, ಈ ಬೈಕನ್ನು2014ರ ಆಟೋ ಎಕ್ಸ್‌ಪೋದಲ್ಲೇ ಪ್ರದರ್ಶಿಸಲಾಗಿತ್ತು. ಈಗ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

2)ಟಿವಿಎಸ್‌ ಝೆಪ್ಪೆಲಿನ್‌
ಟಿವಿಎಸ್‌ಕಂಪನಿಯ ಮೊದಲ ಕ್ರೂಸರ್‌ ಬೈಕ್‌ ಇದು. ಮುಂದಿನ ವರ್ಷವೇ ಭಾರತದಲ್ಲಿ ಈ ಬೈಕ್‌ ಲಾಂಚ್‌ ಆಗಲಿದೆ.1.50 ಲಕ್ಷ ರೂ. ಬೆಲೆ ಬಾಳುವ ಇದು, 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿತವಾಗಿತ್ತು.220ಸಿಸಿ ಎಂಜಿನ್‌ ಸಾಮರ್ಥ್ಯದ ಏರ್‌ಕೂಲರ್‌ ಮೋಟಾರ್‌ ಮತ್ತು ಎಲೆ ಕ್ಟ್ರಿಕ್‌ ಮೋಟಾರ್‌ ಅವಲಂಬಿತವಾಗಿದೆ.

3)ರಾಯಲ್‌ ಎನ್‌ಫೀಲ್ಡ್‌ ಕ್ರ್ಯೂಸರ್‌ 650
ಇತ್ತೀಚೆಗಷ್ಟೇ ಭಾರತದ ರಸ್ತೆಯಲ್ಲಿ ಈ ಬೈಕ್‌ನ ಪರೀಕ್ಷೆ ನಡೆಸಲಾಗಿದೆ. ಮುಂದಿನ ವರ್ಷ ಈ ಬೈಕ್‌ಕೂಡ ಲಾಂಚ್‌ ಆಗಲಿದೆ. ಇದರಲ್ಲಿಕ್ಲಾಕ್‌, ಸರ್ವೀಸ್‌ ರಿಮೈಂಡರ್‌, ಬ್ಯಾಟರಿ ವೋಲ್ಟೆಜ್‌ ಇಂಡಿಕೇಟರ್‌ ಮತ್ತು ಟೆಲ್‌-ಟೇಲ್‌ ಲೈಟ್ಸ್‌ನ ಸೌಲಭ್ಯ ವಿದೆ. ಈ ಬೈಕ್‌648ಸಿಸಿ ಸಾಮರ್ಥ್ಯವುಳ್ಳ
ಎಂಜಿನ್‌ ಹೊಂದಿದ್ದು,3.5 ಲಕ್ಷ ರೂ. ಬೆಲೆ ಬಾಳಲಿದೆ.

Advertisement

4)ಸುಜುಕಿ ಇಂಟ್ರ್ಯೂಡರ್‌ 250
ಈ ಬೈಕ್‌ಕೂಡ ಮುಂದಿನ ಜುಲೈ ವೇಳೆಗೆ ಭಾರತದಲ್ಲಿ ಲಾಂಚ್‌ ಆಗ ಲಿದೆ.1.8 ಲಕ್ಷ ರೂ. ಬೆಲೆಯ ಈ ಬೈಕಿನ ವಿನ್ಯಾಸ ಇತ್ತೀಚೆಗಷ್ಟೇ ಆನ್‌ಲೈನ್‌ನಲ್ಲಿ ಮೂಡಿತ್ತು. ಅಂದರೆ, ಲೋ ಸೀಟ್‌, ಸುಲಭವಾಗಿ ಸಿಗುವಂಥ ಹ್ಯಾಂಡಲ್‌ ಬಾರ್‌ ಫಾರ್ವರ್ಡ್‌ ಸೆಟ್‌ ಫ‌ೂಟ್‌ಪೆಗ್ಸ್‌ಗಳಿವೆ.

5)2021 ಕವಾಸಾಕಿ ನಿಂಜಾ ಝಡ್‌ಎಕ್ಸ್‌-10ಆರ್‌
ಕಳೆದ ತಿಂಗಳಷ್ಟೇ ಈ ಬೈಕ್‌ ಅನ್ನು ಅನಾವರಣ ಮಾಡಲಾಗಿದ್ದು, ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿದೆ. 998ಸಿಸಿ ಸಾಮರ್ಥ್ಯದ ಈ ಬೈಕ್‌ 13.99 ಲಕ್ಷ ರೂ. ಬೆಲೆ ಬಾಳಲಿದೆ. ಇದು ನಾಲ್ಕು ಸಿಲಿಂಡ ರ್‌ನ ಬೈಕ್‌.

Advertisement

Udayavani is now on Telegram. Click here to join our channel and stay updated with the latest news.

Next