Advertisement

9000 ಕರೆ ಕದ್ದಾಲಿಕೆ ಮಾಡಿದ್ದ ಯುಪಿಎ

06:00 AM Dec 23, 2018 | |

ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರವು ಜನರ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿರುವ ಮಧ್ಯೆಯೇ ಯುಪಿಎ ಅಧಿಕಾರದಲ್ಲಿದ್ದಾಗ ಪ್ರತಿ ತಿಂಗಳು 7500ರಿಂದ 9000 ಫೋನ್‌ಗಳನ್ನು ಕದ್ದಾಲಿಕೆ ಮಾಡಲಾಗುತ್ತಿತ್ತು ಎಂಬುದು ಬಹಿರಂವಾಗಿದೆ. 

Advertisement

2013ರಲ್ಲಿ ಆರ್‌ಟಿಐ ಅಡಿಯಲ್ಲಿ ನೀಡಿದ ಪ್ರತಿಕ್ರಿಯೆಯಲ್ಲಿ ಈ ಮಾಹಿತಿ ತಿಳಿದು ಬಂದಿತ್ತು. ಅಷ್ಟೇ ಅಲ್ಲ, ಪ್ರತಿ ತಿಂಗಳೂ 300 -500 ಇಮೇಲ್‌ಗ‌ಳನ್ನೂ ಸರಕಾರ ತೆರೆದು ಓದುತ್ತಿತ್ತು. ಪ್ರಸನ್‌ಜಿತ್‌ ಮೊಂಡಲ್‌ ಎಂಬುವವರು ಸಲ್ಲಿಸಿದ್ದ ಅರ್ಜಿಗೆ  ಗೃಹ ಇಲಾಖೆ ಈ ಮಾಹಿತಿ ನೀಡಿತ್ತು.

ಜೊತೆಗೆ ಆಗಲೂ ಸರಕಾರ 10 ತನಿಖಾ ಏಜೆನ್ಸಿ ಗಳಿಗೆ ಕಣ್ಗಾವಲಿಡಲು ಅನುಮತಿ ನೀಡಿತ್ತು. ಡಿ. 20 ರಂದು ಕಣ್ಗಾವಲು ಆದೇಶವನ್ನು ಮರುಜಾರಿ ಮಾಡುತ್ತಿದ್ದಂತೆಯೇ, ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್‌ ತೀವ್ರ ವಾಗ್ಧಾಳಿ ನಡೆಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next