ಲಕ್ನೋ:20 ವರ್ಷದ ವಿಧವೆ ಮಗಳನ್ನು ಸ್ವತಃ ತಂದೆ ಹಾಗೂ ಚಿಕ್ಕಮ್ಮ ವ್ಯಕ್ತಿಯೊಬ್ಬನಿಗೆ 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಆ ವ್ಯಕ್ತಿ ತನ್ನ ಕಾಮುಕ ಗೆಳೆಯರೊಡನೆ ಸೇರಿ ಯುವತಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಏತನ್ಮಧ್ಯೆ ಪೊಲೀಸರ ಬಳಿ ನೆರವು ನೀಡುವಂತೆ ಕೇಳಿಕೊಂಡಿದ್ದಳು, ಅಲ್ಲಿಯೂ ನ್ಯಾಯ ಸಿಗಲಿಲ್ಲವಾಗಿತ್ತು.
ಪೊಲೀಸರ ಅಸಹಕಾರದಿಂದ ಮನನೊಂದ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದಳು. ಶೇ.80ರಷ್ಟು ಸುಟ್ಟು ಹೋದ ಗಾಯಗಳಿಂದ ಇದೀಗ ಆಕೆ ಆಸ್ಪತ್ರೆಯಲ್ಲಿ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ವರದಿ ತಿಳಿಸಿದೆ.
ಮಹಿಳೆ ದೂರು ನೀಡಿದರೂ ಸ್ವೀಕರಿಸದಿರುವ ಬಗ್ಗೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪತ್ರ ಬರೆದಿದ್ದರು.
ಏತನ್ಮಧ್ಯೆ ಮನನೊಂದ ಮಹಿಳೆ ಬೆಂಕಿಹಚ್ಚಿಕೊಂಡಿದ್ದಳು. ಸಂತ್ರಸ್ತೆ ಮಹಿಳೆಗೆ ಪರಿಹಾರ ನೀಡುವಂತೆ ದೆಹಲಿ ಮಹಿಳಾ ಆಯೋಗ ಆಗ್ರಹಿಸಿದೆ. ಅಲ್ಲದೇ ಹಾಪುರ್ ಪೊಲೀಸ್ ವರಿಷ್ಠಾಧಿಕಾರಿ, ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿತ್ತು. ಕೊನೆಗೆ ಹಾಪುರ್ ಪೊಲೀಸರು 14 ಮಂದಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು ಎಂದು ವರದಿ ವಿವರಿಸಿದೆ.