ಲಕ್ನೋ: ಈಗಿನ ಕಾಲದಲ್ಲಿ ಮದುವೆಯಾಗಬೇಕಾದರೆ ವರನಿಗೆ ಉತ್ತಮ ಗುಣದೊಂದಿಗೆ, ಉತ್ತಮ ಸಂಬಳವೂ ಬೇಕು. ಆದರೆ ಇಲ್ಲೊಂದು ಅಪರೂಪದ ಮದುವೆಗೆ ಉತ್ತರ ಪ್ರದೇಶದ ಔರ್ರೈಯಾ ಜಿಲ್ಲೆಯ ಜನರು ಸಾಕ್ಷಿಯಾಗಿದ್ದಾರೆ.
ರಕ್ಷಾ ಎನ್ನುವ 30 ವರ್ಷದ ಯುವತಿಯೊಬ್ಬಳು ತನ್ನ ಕನಸಿನಂತೆ ಮದುವೆಯಾಗಿದ್ದಾರೆ. ಅವರ ಕನಸಿನ ಮದುವೆಗೆ ಅಪಾರ ಜನರು, ಸಂಭ್ರಮ, ಸಂತಸವೂ ಜೊತೆಯಾಗಿದೆ. ಊಟೋಪಚಾರ, ಸಂಗೀತ ಸಂಭ್ರಮದಿಂದ ಮದುವೆ ನೆರವೇರಿದೆ. ಆದರೆ ಆ ಮದುವೆಯಲ್ಲಿ ವರನಿಲ್ಲ. ರಕ್ಷಾ ಮದುವೆಯಾದದ್ದು ಶ್ರೀಕೃಷ್ಣನನ್ನು. ಪೂಜೆಸುವ, ಆರಾಧಿಸುವ ಶ್ರೀಕೃಷ್ಣ ದೇವರನ್ನು.!
ಇದನ್ನೂ ಓದಿ: ಕಾರ್ಯಾಚರಣೆ ಸ್ಥಗಿತ: ಕೊಳವೆ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ಮೃತ್ಯು
ತನ್ನ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಸದ್ಯ ಎಲ್ ಎಲ್ ಬಿ ಓದುತ್ತಿರುವ ರಕ್ಷಾ ಶ್ರೀಕೃಷ್ಣ ದೇವರನ್ನು ಶ್ರದ್ಧೆಯಿಂದ ಪೂಜಿಸುವ ಆರಾಧಿಸುವ ಅಪ್ಪಟ್ಟ ಭಕ್ತೆ. ತಾನು ಮದುವೆಯಾದರೂ ಶ್ರೀಕೃಷ್ಣನೊಂದಿಗೆ ಮೊದಲಿನ ಹಾಗೆಯೇ ಭಕ್ತಿಯಿಂದ ಇರಬೇಕೆನ್ನುವ ಉದ್ದೇಶದಿಂದ ತನ್ನ ತಂದೆಯ ಬಳಿ ಕೃಷ್ಣನನ್ನೇ ಮದುವೆಯಾಗಬೇಕೆಂದು ಹೇಳಿದ್ದಾರೆ. ಮಗಳ ಕನಸಿನಂತೆ ರಂಜಿತ್ ಸಿಂಗ್ ಸೋಲಂಕಿ ಮದುವೆ ಆಯೋಜನೆಯನ್ನು ಮಾಡಿದ್ದಾರೆ.
ಅದ್ದೂರಿ ಮಂಟಪ, ಆಮಂತ್ರಣ ಮಾಡಿ ನೆಂಟರಿಗೆ ಆಹ್ವಾನಿಸಿದ್ದಾರೆ. ಶ್ರೀಕೃಷ್ಣನ ಮೂರ್ತಿಯನ್ನು ಹೊತ್ತ ಮದುವೆಯ ಮೆರವಣಿಗೆಯು ಮದುವೆಯ ಸ್ಥಳಕ್ಕೆ ತಲುಪಿ, ಅಲ್ಲಿ ಬಾರಾತಿಗಳು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು. ಬಂದ ನೆಂಟರಿಗೆ ಊಟೋಪಚಾರ ನೀಡಲಾಗಿದೆ.
ವಿವಾಹ ಸಮಾರಂಭದ ನಂತರ, ವಧು ಕೃಷ್ಣನ ಮೂರ್ತಿಯೊಂದಿಗೆ ಜಿಲ್ಲೆಯ ಸುಖಚೈನ್‌ಪುರ ಪ್ರದೇಶದಲ್ಲಿನ ತನ್ನ ಸಂಬಂಧಿಕರ ಸ್ಥಳಕ್ಕೆ ತೆರಳಿದ್ದಾಳೆ. ಆ ಬಳಿಕ ತನ್ನ ಪತಿ ಶ್ರೀಕೃಷ್ಣನ ಮೂರ್ತಿಯನ್ನು ಮಡಿಲಿನಲ್ಲಿ ಹೊತ್ತುಕೊಂಡು ತವರಿಗೆ ಬಂದಿದ್ದಾರೆ.