Advertisement

Shocking: ಸಹೋದರನಿಗೆ ಕಿಡ್ನಿ ದಾನ ಮಾಡಿದ ಪತ್ನಿ… ಫೋನಲ್ಲೇ ತ್ರಿವಳಿ ತಲಾಕ್ ನೀಡಿದ ಪತಿ

01:24 PM Dec 21, 2023 | Team Udayavani |

ಗೊಂಡಾ: ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ ವಿಚಾರವನ್ನು ಸೌದಿಯಲ್ಲಿ ನೆಲೆಸಿರುವ ತನ್ನ ಪತಿಗೆ ತಿಳಿಸಿದ ಬೆನ್ನಲ್ಲೇ ಪತಿ ತನ್ನ ಪತ್ನಿಗೆ ಫೋನ್ ಮೂಲಕ ತ್ರಿವಳಿ ತಲಾಕ್ ನೀಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Advertisement

ತನ್ನ ಸಹೋದರನ ಜೀವ ಉಳಿಸಿದ ಪುಣ್ಯದ ಕೆಲಸ ಮಾಡಿದ ಸಹೋದರಿ ಈ ವಿಚಾರವನ್ನು ಗಂಡನ ಬಳಿ ಹಂಚಿಕೊಳ್ಳುವ ಎಂದು ಕರೆ ಮಾಡಿದರೆ ವಿಷಯ ತಿಳಿದು ಕೋಪಗೊಂಡ ಗಂಡ ಫೋನ್ ಮೂಲಕವೇ ಹೆಂಡತಿಗೆ ತ್ರಿವಳಿ ತಲಾಕ್ ನೀಡಿದ್ದಾನೆ, ಇದರಿಂದ ಪತ್ನಿ ಆಘಾತಕ್ಕೆ ಒಳಗಾಗಿದ್ದಾಳೆ.

ಏನಿದು ಪ್ರಕರಣ:
ಉತ್ತರ ಪ್ರದೇಶದ ಬೈರಿಯಾಹಿ ಗ್ರಾಮದಲ್ಲಿ ಮಹಿಳೆ ವಾಸಿಸುತ್ತಿದ್ದು ಆಕೆಯ ಗಂಡ ದೂರದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡಿದ್ದಾನೆ, ಇತ್ತ ತನ್ನ ತಾಯಿ, ಸಹೋದರನ ಜೊತೆ ಪತ್ನಿ ಊರಿನಲ್ಲಿ ವಾಸಿಸುತ್ತಿದ್ದಳು, ಕೆಲ ದಿನದ ಹಿಂದೆ ಸಹೋದರನಿಗೆ ಅನಾರೋಗ್ಯ ಉಂಟಾಗಿದೆ ಈ ವೇಳೆ ಸಹೋದರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ಪರೀಕ್ಷೆ ನಡೆಸಿದ ವೇಳೆ ಕಿಡ್ನಿಯಲ್ಲಿ ಸಮಸ್ಯೆ ಇರುವುದು ಗೊತ್ತಾಗಿದೆ ಅದರಂತೆ ವೈದ್ಯರು ಸಹೋದರನ ಜೀವ ಉಳಿಯಬೇಕಾದರೆ ಕಿಡ್ನಿ ಬದಲಾವಣೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ ಆದರೆ ವೈದ್ಯರು ಹೇಳಿದ ವಿಚಾರಕ್ಕೆ ಹಿಂದೆ ಮುಂದೆ ನೋಡದ ಸಹೋದರಿ ತನ್ನದೇ ಕಿಡ್ನಿ ದಾನ ಮಾಡುವುದಾಗಿ ವೈದ್ಯರ ಬಳಿ ಹೇಳಿಕೊಂಡಿದ್ದಾಳೆ, ಆದರೆ ಈ ವಿಚಾರವನ್ನು ತನ್ನ ಗಂಡನ ಬಳಿ ಹೇಳಿರಲಿಲ್ಲ ಇತ್ತ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆಗೆ ತಯಾರಿ ನಡೆಸಿ ಸಹೋದರಿಯ ಒಂದು ಕಿಡ್ನಿಯನ್ನು ಸಹೋದರನಿಗೆ ಕಸಿ ಮಾಡಿದ್ದಾರೆ.

ಇದಾದ ಬಳಿಕ ಇಬ್ಬರೂ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಆ ಬಳಿಕ ಸಹೋದರಿ ತಾನು ಕಿಡ್ನಿ ದಾನ ಮಾಡಿರುವ ವಿಚಾರವನ್ನು ತನ್ನ ಪತಿಯ ಬಳಿ ಹೇಳಲು ಕರೆ ಮಾಡಿದ್ದಾಳೆ ಈ ವೇಳೆ ತಾನು ಸಹೋದರನಿಗೆ ಕಿಡ್ನಿ ದಾನ ಮಾಡಿದ ವಿಚಾರ ಗಂಡನ ಬಳಿ ಹೇಳಿಕೊಂಡಿದ್ದಾಳೆ, ಆದರೆ ಹೆಂಡತಿ ತಾನು ಕಿಡ್ನಿ ದಾನ ಮಾಡಿರುವ ವಿಚಾರ ಹೇಳುತ್ತಲೇ ಕೋಪಗೊಂಡ ಪತಿ ತ್ರಿವಳಿ ತಲಾಕ್ ನೀಡಿದ್ದಾನೆ, ಪತಿಯ ಪ್ರತಿಕ್ರಿಯೆ ಕೇಳಿ ಆಘಾತಕ್ಕೊಳಗಾದ ಮಹಿಳೆ ಪತಿಯ ಹೇಳಿಕೆ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ.

ತ್ರಿವಳಿ ತಲಾಖ್ ಪದ್ಧತಿಯನ್ನು 2019 ರಲ್ಲೇ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲಾಯಿದೆ ಹಾಗಾಗಿ ಅದಕ್ಕೆ ಮಾನ್ಯತೆ ಇಲ್ಲ ಎಂದ ಪೊಲೀಸರು. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: West Indies ತಂಡಕ್ಕೆ ಮೇಜರ್ ಸರ್ಜರಿ; ಆಸೀಸ್ ಸರಣಿಗೆ ಏಳು ಹೊಸ ಆಟಗಾರರು ಆಯ್ಕೆ

Advertisement

Udayavani is now on Telegram. Click here to join our channel and stay updated with the latest news.

Next