Advertisement

ಹೊಡೆದು ಸಾಯಿಸಿದ ನಾಯಿಯನ್ನು ಕೆರೆಗೆ ಬಿಸಾಕಲು ಹೋಗುವಾಗ ಕಾಲು ಜಾರಿ ತಾನೇ ಬಿದ್ದು ಮೃತಪಟ್ಟ ಮಹಿಳೆ.!

12:26 PM Jan 08, 2023 | Team Udayavani |

ಲಕ್ನೋ: ನಾಯಿ ಕಚ್ಚಿದ ಕಾರಣಕ್ಕೆ ಮಹಿಳೆಯೊಬ್ಬರು ನಾಯಿಯನ್ನೇ ಹೊಡೆದು ಸಾಯಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

Advertisement

ಮೃತ ಮಹಿಳೆಯನ್ನು ರೂಬಿ ಎಂದು ಗುರುತಿಸಲಾಗಿದೆ.

ರೂಬಿ ಅವರ ಮನೆಯ ನಾಯಿ ರೂಬಿ ಹಾಗೂ ಅವರ ಮಗುವನ್ನು ಕಚ್ಚಿದ ಕಾರಣಕ್ಕೆ ಸಿಟ್ಟಾಗಿ, ನಾಯಿಗೆ ಹೊಡೆದಿದ್ದಾರೆ. ನಾಯಿಗೆ ಜೋರಾಗಿ ಹೊಡೆದ ಪರಿಣಾಮ ಸಾಕು ನಾಯಿ ಕೊನೆಯುಸಿರೆಳೆದಿದೆ. ಸತ್ತು ಬಿದ್ದ ನಾಯಿಯ ಮೃತದೇಹವನ್ನು ದೂರ ಹೋಗಿ ಬಿಸಾಕುವ ನಿಟ್ಟಿನಲ್ಲಿ ರೂಬಿ ಅದನ್ನು ಹಿಡಿದುಕೊಂಡು ಕೆರೆ ಬಳಿ ಹೋಗುತ್ತಾರೆ. ಇನ್ನೇನು ನಾಯಿಯ ಮೃತದೇಹವನ್ನು ಕೆರೆಗೆ ಬಿಸಾಕುವ ವೇಳೆಯೇ ರೂಬಿ ಅದರೊಂದಿಗೆಯೇ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹಿರಿಯ ಬಿಜೆಪಿ ನಾಯಕ, ಪ.ಬಂಗಾಳದ ಮಾಜಿ ರಾಜ್ಯಪಾಲ ಕೇಶರಿನಾಥ್ ತ್ರಿಪಾಠಿ ಇನ್ನಿಲ್ಲ

ಘಟನೆ ಬಗ್ಗೆ ಮಾಹಿತಿ ಇಲ್ಲದ ರೂಬಿ ಪತಿ, ಪತ್ನಿ ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲು ಹೋಗುವಾಗ ಕೆರೆಯ ಪಕ್ಕದಲ್ಲಿ ಪತ್ನಿಯ ಚಪ್ಪಲಿಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Advertisement

ಮೃತದೇಹವನ್ನು ಕೆರೆಯಿಂದ ಮೇಲೆ ತೆಗೆದು ಪೋಸ್ಟ್‌ ಮಾರ್ಟಂಗಾಗಿ ಕಳುಹಿಸಲಾಗಿದೆ. ಘಟನೆ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next