Advertisement

ಯುಪಿ ನಗರ ಸ್ಥಳೀಯ ಸಂಸ್ಥೆ: 1,420 ಸ್ಥಾನಗಳಲ್ಲಿ 813 ಬಿಜೆಪಿಗೆ,ಎಸ್ ಪಿಗೆ 191

04:20 PM May 14, 2023 | Team Udayavani |

ಲಕ್ನೋ : ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಪೊರೇಟರ್‌ಗಳ ವರ್ಗದ 1,420 ಸ್ಥಾನಗಳ ಪೈಕಿ ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ 813 ಸ್ಥಾನಗಳನ್ನು ಗೆದ್ದಿದ್ದರೆ, ಪ್ರತಿಪಕ್ಷ ಸಮಾಜವಾದಿ ಪಕ್ಷ 191 ಮತ್ತು ಬಹುಜನ ಸಮಾಜ ಪಕ್ಷ 85 ಸ್ಥಾನಗಳನ್ನು ಗಳಿಸಿದೆ.

Advertisement

ರಾಜ್ಯ ಚುನಾವಣಾ ಆಯೋಗದ (SEC) ಪ್ರಕಾರ, ಜೌನ್‌ಪುರ ಜಿಲ್ಲೆಯ ಖೇತ್ಸರಾಯ್‌ನ ನಗರ ಪಂಚಾಯತ್ ಅಧ್ಯಕ್ಷ – ಕೇವಲ ಒಂದು ಸ್ಥಾನದ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.

ವಾರಾಣಸಿ, ಲಕ್ನೋ, ಅಯೋಧ್ಯೆ, ಝಾನ್ಸಿ, ಬರೇಲಿ, ಮಥುರಾ-ವೃಂದಾವನ, ಮೊರಾದಾಬಾದ್, ಸಹರಾನ್‌ಪುರ, ಪ್ರಯಾಗರಾಜ್, ಅಲಿಗಢ, ಶಹಜಾನ್‌ಪುರ, ಗಾಜಿಯಾಬಾದ್, ಆಗ್ರಾ, ಕಾನ್ಪುರ, ಗೋರಖ್‌ಪುರ, ಫಿರೋಜಾಬಾದ್ ಮತ್ತು ಮೀರತ್ ಸೇರಿ ರಾಜ್ಯದ ಎಲ್ಲಾ 17 ಮೇಯರ್ ಸ್ಥಾನಗಳಲ್ಲಿ ಬಿಜೆಪಿ ಶನಿವಾರ ಭರ್ಜರಿ ಗೆಲುವು ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next