Advertisement

ಯುಪಿ: ಅತ್ಯಾಚಾರ ಪ್ರಕರಣದಲ್ಲಿ ಮೂವರು ಧರ್ಮಗುರುಗಳ ವಿರುದ್ಧ ಕೇಸ್

08:03 PM Sep 14, 2022 | Team Udayavani |

ಮಥುರಾ : ಇಲ್ಲಿನ ಪೊಲೀಸರು ಬುಧವಾರ ಮೂವರು ಧರ್ಮಗುರುಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಸದೊಲ್ಲಾ ಮಸೀದಿಯ ಧರ್ಮಗುರುಗಳ ವಿರುದ್ಧ ಮಹಿಳೆಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಕಿಶೋರ್ ಹೇಳಿದ್ದಾರೆ. ವಿವಾಹದ ನೆಪದಲ್ಲಿ ಧರ್ಮಗುರು ರಶೀದ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ, ನಂತರ ಮತ್ತಿಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

“ರಶೀದ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದರು ಆದರೆ ನಂತರ ನಿರಾಕರಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ಕುಟುಂಬವು ದೂರಿನೊಂದಿಗೆ ಮಸೀದಿಯ ಕಾರ್ಯದರ್ಶಿಯನ್ನು ಸಂಪರ್ಕಿಸಿದಾಗ, ಅವನು ಇನ್ನೊಬ್ಬ ವ್ಯಕ್ತಿಯೊಂದಿಗೆ ಮೂವರು ಧರ್ಮಗುರುಗಳು ಅಲ್ಲಿಂದ ಪರಾರಿಯಾಗಲು ಸಹಾಯ ಮಾಡಿದ ಎಂದು ಎಸ್‌ಎಚ್‌ಒ ಹೇಳಿದರು. ಮಸೀದಿ ಕಾರ್ಯದರ್ಶಿ ಮತ್ತು ಐದನೇ ಆರೋಪಿ ಕೂಡ ತಲೆಮರೆಸಿಕೊಂಡಿದ್ದಾನೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next