Advertisement

ಮದುವೆಗೆ ಒಪ್ಪದ ಕಾರಣ ತಾಯಿ-ಮಗಳನ್ನು ಇರಿದು ಕೊಂದ ಪಾಪಿ..!

03:02 PM Mar 08, 2021 | Team Udayavani |

ಆಗ್ರಾ (ಉತ್ತರ ಪ್ರದೇಶ) : ಮದುವೆಗೆ ಒಪ್ಪದ ಕಾರಣ ವ್ಯಕ್ತಿಯೋರ್ವ ಯುವತಿಯನ್ನು(19) ಮತ್ತು ಆಕೆಯ ತಾಯಿಯನ್ನು(50) ಇರಿದು ಕೊಂದಿರುವ ಘಟನೆ ಭಾನುವಾರ ರಾತ್ರಿ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಪಕ್ಕದ ಮನೆಯ ಮತ್ತೋರ್ವ ಮಹಿಳೆಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೊಲೆ ಮಾಡಿರುವ ಆರೋಪಿಯನ್ನು ಗೋವಿಂದ ಎಂದು ಗುರುತಿಸಲಾಗಿದ್ದು, ಈ ವ್ಯಕ್ತಿ ಕೊಲೆಯಾಗಿರುವ ಯುವತಿಯ ಗೆಳೆಯನಾಗಿದ್ದು, ಮದುವೆಯಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಎರಡೂ ಕುಟುಂಬದ ಮಧ್ಯೆ ಮನಸ್ತಾಪಗಳಿದ್ದು, ಯುವತಿಗೆ ಬೇರೆ ಕಡೆ ಮದುವೆ ಮಾಡಲು ಗಂಡು ಹುಡುಕುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next