Advertisement
ಅಮಾನತು ಗೊಂಡಿರುವ ಶಿಕ್ಷಕನನ್ನು ಪ್ರಿಯಂ ಗೋಯಲ್ ಎನ್ನಲಾಗಿದ್ದು, ಈ ಶಿಕ್ಷಕ ತನ್ನ ಕರ್ತವ್ಯದ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡುವ ಬದಲು ತರಗತಿಯಲ್ಲಿ ಕುಳಿತುಕೊಂಡು ತನ್ನ ಮೊಬೈಲ್ ನಲ್ಲಿ ಗೇಮ್ಸ್ ಆಡುವುದು, ಬೇರೆಯವರಿಗೆ ಕರೆ ಮಾಡಿ ಮಾತನಾಡುವುದು ಹೀಗೆ ಪಾಠ ವೊಂದನ್ನು ಬಿಟ್ಟು ಮೊಬೈಲ್ ನಲ್ಲೆ ಹೆಚ್ಚು ಕಾಲ ಕಳೆಯುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾರೆ ಅಲ್ಲದೆ ಈ ಕುರಿತು ಉನ್ನತ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿದ್ದು ಅದರಂತೆ ಶಾಲೆಗೆ ಧಿಡೀರ್ ಪರಿಶೀಲನೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಶಿಕ್ಷಕ ತನ್ನ ಕೈಯಲಿ ಮೊಬೈಲ್ ಹಿಡಿದುಕೊಂಡಿರುವುದು ಗಮನಕ್ಕೆ ಬಂದಿದೆ ಅಲ್ಲದೆ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ಕ್ಯಾಂಡಿಕ್ರಷ್ ಆಡುತ್ತಿರುವುದು ಬೆಳಕಿಗೆ ಬಂದಿದೆ.ಇದಾದ ಬಳಿಕ ತರಗತಿಯ ವಿದ್ಯಾರ್ಥಿಗಳ ಪುಸ್ತಕಗಳನ್ನು ಪರಿಶೀಲನೆ ನಡೆಸಿದ ವೇಳೆ ವಿದ್ಯಾರ್ಥಿಗಳು ತಪ್ಪು ತಪ್ಪು ಬರೆದಿರುವುದು ಬೆಳಕಿಗೆ ಬಂದಿದೆ, ಈ ಕುರಿತು ಮಕ್ಕಳಲ್ಲಿ ವಿಚಾರಿಸಿದಾಗ ವಿದ್ಯಾರ್ಥಿಗಳು ಶಿಕ್ಷಕರು ಪಾಠ ಮಾಡುವ ಸಮಯದಲ್ಲಿ ಮೊಬೈಲ್ ಹಿಡಿದುಕೊಂಡು ಗೇಮ್ಸ್ ಆಡುತ್ತಾ ಇರುತ್ತಾರೆ, ಇದ್ದದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ ಎಂದು ಹೇಳಿಕೊಂಡಿದ್ದಾರೆ, ಅಲ್ಲದೆ ನಮ್ಮ ಹೋಂ ವರ್ಕ್ ಅನ್ನು ಶಿಕ್ಷಕರು ಪರಿಶೀಲನೆ ಮಾಡುವುದಿಲ್ಲ ಎಂದಿದ್ದಾರೆ,
ಘಟನೆ ಸಂಬಂಧ ಶಿಕ್ಷಕನ ಮೊಬೈಲ್ ಫೋನ್ ಪಡೆದು ಪರಿಶೀಲನೆ ನಡೆಸಿದ ವೇಳೆ ಶಾಲಾ ಸಮಯದಲ್ಲಿ ಸುಮಾರು ಐದು ಗಂಟೆಗಳ ಕಾಲ ಮೊಬೈಲ್ ಬಳಕೆಯನ್ನೇ ಮಾಡಿರುವುದು ಬೆಳಕಿಗೆ ಬಂದಿದೆ, ಇನ್ಸ್ಟಾಗ್ರಾಮ್, ಫೇಸ್ ಬುಕ್, ಗೇಮ್ಸ್, ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಿರುವುದು ಕಂಡುಬಂದಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಮಯದಲ್ಲಿ ವಿಡಿಯೋ ಗೇಮ್ ಆಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದಾರೆ ಎಂದು ರಾಜೇಂದ್ರ ಪನ್ಸಿಯಾ ಹೇಳಿದ್ದು ಇದರ ಬೆನ್ನಿಗೆ ಕರ್ತವ್ಯದಿಂದ ಅಮಾನತು ಗೊಳಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: Hubli; ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡಿದ್ದ ವಿದ್ಯಾರ್ಥಿ ನೇಣಿಗೆ ಶರಣು