ಉತ್ತರಪ್ರದೇಶ: ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ವಿದ್ಯಾರ್ಥಿಯಿಂದ ಕಪಾಳಮೋಕ್ಷ ಮಾಡಿಸಿದ ಆರೋಪದ ಮೇಲೆ ಶಾಲಾ ಶಿಕ್ಷಕಿಯನ್ನು ಬಂಧಿಸಿದ ಘಟನೆ ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ.
ಸೆಪ್ಟೆಂಬರ್ 26 ರಂದು ಈ ಘಟನೆ ನಡೆದಿದ್ದು, 5 ನೇ ತರಗತಿ ವಿದ್ಯಾರ್ಥಿಗೆ ಸಜಿಶ್ತಾ ಎಂಬ ಶಿಕ್ಷಕಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ ಇದನ್ನು ಹೇಳಲು ವಿದ್ಯಾರ್ಥಿಗೆ ಸಾಧ್ಯವಾಗದಿದ್ದಾಗ ಅದೇ ತರಗತಿಯ ಸಹ ವಿದ್ಯಾರ್ಥಿಯಿಂದ ಶಿಕ್ಷಕಿ ಕಪಾಳಮೋಕ್ಷ ಮಾಡುವಂತೆ ಹೇಳಿದ್ದಾರೆ ಅದರಂತೆ ಶಿಕ್ಷಕಿಯ ಮಾತಿಗೆ ವಿದ್ಯಾರ್ಥಿ ಸಹ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದಾನೆ.
ತರಗತಿಯಲ್ಲಿ ಆದ ಅವಮಾನದಿಂದ ವಿದ್ಯಾರ್ಥಿ ಮನೆಯಲ್ಲಿ ಯಾರೊಂದಿಗೂ ಮಾತನಾಡದೆ ಸುಮ್ಮನಿದ್ದುದ್ದನ್ನು ಪ್ರಶ್ನಿಸಿದ ಪೋಷಕರಿಗೆ ವಿದ್ಯಾರ್ಥಿ ತರಗತಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ವಿದ್ಯಾರ್ಥಿ ಹೇಳಿಕೆ ಮೇಲೆ ಶಾಲಾ ಶಿಕ್ಷಕಿಯ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದು ಬಳಿಕ ಘಟನೆಗೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸಂಬಂಧಿಸಿ ಪೊಲೀಸರು ಗುರುವಾರ ಶಿಕ್ಷಕಿಯನ್ನು ಬಂಧಿಸಿದ್ದಾರೆ, ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ.
ಇದನ್ನೂ ಓದಿ: Sapta Sagaradaache Ello ಎರಡನೇ ಭಾಗ ಬಿಡುಗಡೆ ಮುಂದಕ್ಕೆ; ಒಟಿಟಿಗೆ ಬಂತು ಸೈಡ್ 1