ಉತ್ತರ ಪ್ರದೇಶ: ಕರ್ತವ್ಯದಲ್ಲಿದ್ದ ಶಾಲಾ ಪ್ರಾಂಶುಪಾಲೆಯನ್ನು ಕುರ್ಚಿ ಸಮೇತ ಹೊರದಬ್ಬಿ ಆ ಸ್ಥಾನಕ್ಕೆ ನೂತನ ಪ್ರಾಂಶುಪಾಲರನ್ನು ನೇಮಿಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಾಲಾ ಆಡಳಿತ ಮಂಡಳಿಯ ಹೇಳಿಕೆಯಂತೆ ಶಾಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಪೇಪರ್ ಸೋರಿಕೆಯಾಗಿತ್ತು ಈ ಪ್ರಕರಣದಲ್ಲಿ ಪ್ರಾಂಶುಪಾಲೆ ಕೂಡ ಭಾಗಿಯಾಗಿದ್ದರು ಅಲ್ಲದೆ ಘಟನೆಗೆ ಸಂಬಂಧಿಸಿ ಪ್ರಾಂಶುಪಾಲೆಯನ್ನು ವಜಾಗೊಳಿಸಿದ್ದಾರೆ ಈ ವೇಳೆ ಕುರ್ಚಿಯಿಂದ ಏಳದ ಪ್ರಾಂಶುಪಾಲೆಯನ್ನು ಶಾಲಾ ಆಡಳಿತ ಮಂಡಳಿ ಸೇರಿಕೊಂಡು ಕಚೇರಿಯಿಂದ ಬಲವಂತವಾಗಿ ಹೊರಹಾಕಿದ ನಾಟಕೀಯ ದೃಶ್ಯಗಳು ಕಂಡುಬಂದವು.
ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯ ಪ್ರಾಂಶುಪಾಲೆಯಾದ ಪಾರುಲ್ ಸೊಲೊಮನ್ ಅವರ ಹೆಸರೂ ಪೇಪರ್ ಸೋರಿಕೆ ಪ್ರಕರಣದಲ್ಲಿ ಕೇಳಿಬಂದಿತ್ತು ಇದರಿಂದ ಪ್ರಾಂಶುಪಾಲೆಯನ್ನು ಬದಲಾಯಿಸುವ ನಿರ್ಣಯಕ್ಕೆ ಶಾಲಾ ಆಡಳಿತ ಬಂದಿದ್ದು ಪಾರುಲ್ ಜಾಗಕ್ಕೆ ಹೊಸ ಪ್ರಾಂಶುಪಾಲೆಯನ್ನು ನೇಮಕ ಮಾಡಿ ಹಾಲಿ ಪ್ರಾಂಶುಪಾಲೆಯನ್ನು ಕುರ್ಚಿ ಬಿಟ್ಟುಕೊಡುವಂತೆ ಕೇಳಿದ್ದಾರೆ ಆದರೆ ಆಕೆ ಕುರ್ಚಿ ಬಿಟ್ಟು ಕೊಡಲು ನಿರಾಕರಿಸಿದ ಕಾರಣಕ್ಕೆ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ