Advertisement

ಯುಪಿಯಲ್ಲಿ ‘ಮಿಸ್ ಬಿಕಿನಿ’ಗೆ ಕಾಂಗ್ರೆಸ್ ಟಿಕೆಟ್: ವ್ಯಾಪಕ ಟೀಕೆ

07:25 PM Jan 15, 2022 | Team Udayavani |

ಲಕ್ನೋ : ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಾಮಾನ್ಯ ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಹೊಸತನ ತೋರಿರುವ ಕಾಂಗ್ರೆಸ್ ಪಕ್ಷ ‘ಬಿಕಿನಿ ಮಾಡೆಲ್’ ಎಂದು ಸುದ್ದಿಯಾಗಿದ್ದ ನಟಿಗೆ ಟಿಕೆಟ್ ನೀಡಿ ಟ್ರೊಲರ್ ಗಳಿಗೆ ಮತ್ತೆ ಆಹಾರವಾಗಿದೆ.

Advertisement

ಬಲಪಂಥೀಯ ಗುಂಪುಗಳು ಮೀರತ್‌ನ ಹಸ್ತಿನಾಪುರ ವಿಧಾನಸಭಾ ಕ್ಷೇತ್ರದಿಂದ ‘ಬಿಕಿನಿ ಮಾಡೆಲ್’ ಖ್ಯಾತಿಯ ಅರ್ಚನಾ ಗೌತಮ್ ಅವರನ್ನು ಕಣಕ್ಕಿಳಿಸಿರುವ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ವ್ಯಾಪಕವಾಗಿ ಟೀಕಿಸುತ್ತಿವೆ. ಅವರ ಬಿಕಿನಿ ಫೋಟೋಗಳು ಪ್ರವಾಹದೋಪಾದಿಯಲ್ಲಿ ಹರಿದಾಡುತ್ತಿದೆ.

ಅರ್ಚನಾ ಅವರು ‘ಮಿಸ್ ಬಿಕಿನಿ ಇಂಡಿಯಾ 2018’, ‘ಮಿಸ್ ಉತ್ತರ ಪ್ರದೇಶ 2014’ ಮತ್ತು ‘ಮಿಸ್ ಕಾಸ್ಮೋ ವರ್ಲ್ಡ್ 2018’ ನಂತಹ ಹಲವಾರು ಸೌಂದರ್ಯ ಸ್ಪರ್ಧೆಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ :ಹಾರುವ “ಕುದುರೆ”ಗಳಿಗೆ ಸ್ಥಳ ಬಿಡಲು ಬಿಜೆಪಿಯಿಂದಲೇ ಓಪನ್ ಆಫರ್

ಅರ್ಚನಾ ಗೌತಮ್ ಅವರ ಬಿಕಿನಿ ತೊಟ್ಟ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ”ನಾನು ಮಿಸ್ ಬಿಕಿನಿ 2018 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ನಾನು ಮಿಸ್ ಉತ್ತರ ಪ್ರದೇಶ 2014 ಮತ್ತು ಮಿಸ್ ಕಾಸ್ಮೊ ವರ್ಲ್ಡ್ 2018 ಆಗಿದ್ದೇನೆ. ನನ್ನ ರಾಜಕೀಯ ವೃತ್ತಿಯೊಂದಿಗೆ ಮಾಧ್ಯಮಗಳು ನನ್ನ ವೃತ್ತಿಯನ್ನು ವಿಲೀನಗೊಳಿಸದಂತೆ ನಾನು ಜನರನ್ನು ವಿನಂತಿಸುತ್ತೇನೆ” ಎಂದಿದ್ದಾರೆ.

Advertisement

ಚುನಾವಣೆಗೆ ಮುನ್ನ ಹಸ್ತಿನಾಪುರದ ಬಗ್ಗೆ ತನ್ನ ದೂರದೃಷ್ಟಿಯ ಬಗ್ಗೆ ಮಾತನಾಡಿದ ನಟಿ, ಚುನಾವಣೆಯಲ್ಲಿ ಗೆದ್ದರೆ ಅಭಿವೃದ್ಧಿ ಕಾರ್ಯಗಳ ಮೇಲೆ ತನ್ನ ಮುಖ್ಯ ಗಮನ. ‘ಪ್ರಾಚೀನ ಪವಿತ್ರ’ ನಗರವಾಗಿರುವ ಹಸ್ತಿನಾಪುರದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದ್ದಾರೆ.

”ಹಸ್ತಿನಾಪುರ ಪ್ರವಾಸಿ ಸ್ಥಳವಾಗಿದ್ದು, ಸಾಕಷ್ಟು ಪುರಾತನ ದೇವಾಲಯಗಳಿದ್ದರೂ ಸಂಪರ್ಕ ಸಮಸ್ಯೆಯಿಂದ ಜನರು ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ, ಶಾಸಕನಾದ ನಂತರ ಬಸ್ ನಿಲ್ದಾಣ, ರೈಲು ನಿಲ್ದಾಣ ನಿರ್ಮಾಣಕ್ಕೆ ನನ್ನ ಮೊದಲ ಆದ್ಯತೆ. ಪ್ರವಾಸೋದ್ಯಮ ಸಿಕ್ಕರೆ ಒಂದು ಉತ್ತೇಜನ, ಹೆಚ್ಚು ಪ್ರವಾಸಿಗರು ಬರುತ್ತಾರೆ ಮತ್ತು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಗೌತಮ್ ಹೇಳಿರುವುದಾಗಿ ಎಎನ್ಐ ಉಲ್ಲೇಖಿಸಿದೆ.

ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸಂಪೂರ್ಣ ದಿವಾಳಿಯಾಗಿದೆ. ಅವರಿಂದ ಇಂತಹ ಅಭ್ಯರ್ಥಿ ಹೊರತು ಪಡಿಸಿ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ತಿರುಗೇಟು
ಟೀಕೆಗಳಿಗೆ ತಿರುಗೇಟು ನೀಡಿರುವ ಯುಪಿ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ , ಬಿಜೆಪಿಯಲ್ಲಿ ನಟಿಯರು ಜನಪ್ರತಿನಿಧಿಗಳಾಗಿಲ್ಲವೇ? ಕೆಲವರು ಕೇಂದ್ರ ಸಚಿವರು ಕೂಡ ಆಗಿದ್ದಾರೆ. ನಟಿಯೊಬ್ಬರು ರಾಜಕಾರಣಿಯಾಗಲು ಮುಂದೆ ಬಂದರೆ ಪ್ರೋತ್ಸಾಹ ನೀಡಿ ಹುರಿದುಂಬಿಸಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next