Advertisement

Congress ಮುಖಂಡನ ವಿವಾದ; ಅತೀಕ್ ಅಹ್ಮದ್ ಗೆ ಭಾರತ ರತ್ನಕ್ಕೆ ಬೇಡಿಕೆ..!!

05:46 PM Apr 19, 2023 | Team Udayavani |

ಲಕ್ನೋ: ಉತ್ತರ ಪ್ರದೇಶದ ಮುನ್ಸಿಪಲ್ ಚುನಾವಣೆ 2023 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್‌ಕುಮಾರ್ ಸಿಂಗ್ ಅಲಿಯಾಸ್ ರಜ್ಜು ಭಯ್ಯಾ ಅವರು ಹತ್ಯೆಗೀಡಾಗಿರುವ ದರೋಡೆಕೋರ ರಾಜಕಾರಣಿ ಅತೀಕ್ ಅಹ್ಮದ್ ನನ್ನ ಹುತಾತ್ಮ ಎಂದು ಕರೆಯುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.

Advertisement

ಕೊಲೆಯಾದ ದರೋಡೆಕೋರ ರಾಜಕಾರಣಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ,ಅತೀಕ್ ಅಹ್ಮದ್ ಹುತಾತ್ಮರಾದರು, ಆದ್ದರಿಂದ ಅವರ ದೇಹವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿಡಬೇಕಿತ್ತು ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ.

ರಾಜ್‌ಕುಮಾರ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಭಾರತೀಯ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ ಈ ಹೇಳಿಕೆ ಸರಿಯಲ್ಲ. ಹೇಳಿಕೆ ನೀಡಿದ ರಾಜ್ ಕುಮಾರ್ ಅವರನ್ನು 6 ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪ್ರಯಾಗರಾಜ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next